ಕುಮಟಾ ಬಳಿ ಅನಿಲ-ಹೊತ್ತ ಟ್ಯಾಂಕರ್ ಉರುಳಿ ಬಿತ್ತಾದರೂ ಅಪಾಯ ಸಂಭವಿಸಲಿಲ್ಲ!
ಅನಿಲ ಸೋರಲಾರಂಭಿಸಿತೋ ಇಲ್ಲವೋ ಅಂತ ಖಚಿತವಾಗಿ ಗೊತ್ತಿಲ್ಲವಾದರೂ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಮಾಡಿದ ಮೊದಲ ಕೆಲಸವೆಂದರೆ ಸುತ್ತಮುತ್ತ ವಾಸಾಗಿರುಬ ಜನರು ಮನೆಗಳಲ್ಲಿ ಒಲೆ ಹಚ್ಚದಂತೆ ತಾಕೀತು ಮಾಡಿದ್ದು.
ಅನಿಲ (gas) ಮತ್ತು ಇಂಧನ (fuel) ಹೊತ್ತ ಟ್ಯಾಂಕರ್ಗಳು ಪಲ್ಟಿಯಾದಾಗ ಅಪಾಯಗಳು ಜಾಸ್ತಿ ಮಾರಾಯ್ರೇ. ಪೆಟ್ರೋಲ್ ಇಲ್ಲವೇ ಡೀಸೆಲ್ ಹೊತ್ತ ಟ್ಯಾಂಕರ್ಗಳು ಉರುಳಿ ಬಿದ್ದಾಗ ತೈಲ ಸೋರಿ ರಸ್ತೆಯ ಸುತ್ತಮುತ್ತ ಹರಿದುಬಿಡುತ್ತದೆ. ಘಟನೆ ಯಾವುದಾದರೂ ಜನನಿಬಿಡ ಅಥವಾ ಊರಿನಂಥ ಪ್ರದೇಶದಲ್ಲಿ ಜರುಗಿ ಅಲ್ಲಿ ಬೆಂಕಿ ಆಕಸ್ಮಿಕವೇನಾದರೂ (fire mishap) ನಡೆದರೆ ಆಗುವ ಅನಾಹುತ ದೊಡ್ಡದು. ಬಯಲು ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡರೆ ಗಾಳಿಯಿಂದ ಅದು ಬಹುಬೇಗ ಹರಡಲಾರಂಭಿಸುತ್ತದೆ. ಇಂಧನದ ಬದಲು ಅನಿಲ ಹೊತ್ತ ಟ್ಯಾಂಕರ್ ಉರುಳಿಬಿದ್ದರೆ, ಅದು ಇನ್ನೂ ಆಪಾಯಕಾರಿ. ಟ್ಯಾಂಕರ್ ನಿಂದ ಅನಿಲ ಸೋರದಿದ್ದರೆ ಅಪಾಯವಿಲ್ಲ. ಅದರೆ ಸೋರಲಾರಂಭಿಸಿದರೆ ಅದು ಗಾಳಿಯಲ್ಲಿ ಹಬ್ಬಿ ಬಿಡುತ್ತದೆ. ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ದೃಶ್ಯದಲ್ಲಿ ಅನಿಲ ಟ್ಯಾಂಕರೊಂದು ಊರಿರುವ ಕಡೆ ಪಲ್ಟಿಯಾಗಿದೆ. ಇದು ಕಾರವಾರ ಜಿಲ್ಲೆ ಕುಮಟಾ ತಾಲ್ಲೂಕಿನಲ್ಲಿರುವ ಹೆಣ್ಮಾವು ಕ್ರಾಸ್ ಪ್ರದೇಶ.
ಅನಿಲ ಸೋರಲಾರಂಭಿಸಿತೋ ಇಲ್ಲವೋ ಅಂತ ಖಚಿತವಾಗಿ ಗೊತ್ತಿಲ್ಲವಾದರೂ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಮಾಡಿದ ಮೊದಲ ಕೆಲಸವೆಂದರೆ ಸುತ್ತಮುತ್ತ ವಾಸಾಗಿರುಬ ಜನರು ಮನೆಗಳಲ್ಲಿ ಒಲೆ ಹಚ್ಚದಂತೆ ತಾಕೀತು ಮಾಡಿದ್ದು.
ಅದಾದ ಮೇಲೆ ಅಗ್ನಿ ಶಾಮಕ ದಳದ ಸಿಬ್ಬಂದಿ ನೆಲ್ಲಕ್ಕುರುಳಿರುವ ಟ್ಯಾಂಕರ್ ಸುತ್ತಮುತ್ತ ನೀರು ಹೊಯ್ದಿದ್ದಾರೆ. ಒಂದು ಪಕ್ಷ ಅನಿಲ ಸೋರಿತ್ತಿದ್ದರೆ, ನೀರು ಅದನ್ನು ದುರ್ಬಲಗೊಳಿಸುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಘಟನೆಯಿಂದ ಯಾರಿಗೂ ಆಪಾಯವಾಗಿಲ್ಲ. ಫೈರ್ ಬ್ರಿಗೇಡ್ ಸಿಬ್ಬಂದಿಗೆ ಪೊಲೀಸರೂ ನೆರವಾಗಿದ್ದಾರೆ.
ಇಲ್ಲಿ ಕಾಣುತ್ತಿರುವ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಉರುಳಿ ಬಿದ್ದಿದೆ. ರಸ್ತೆ ಮೇಲೆ ಸಾಕಷ್ಟು ವಾಹನಗಳು ಓಡಾಡುತ್ತಿರುವುದು ನೋಡಿದರೆ ರಸ್ತೆ ಬ್ಯುಸಿಯಾಗಿರುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ಒಂಟೆ ಏರಿ ಹವಾಮಾನ ವರದಿ ಮಾಡಿದ ಪಾಕಿಸ್ತಾನ ಪತ್ರಕರ್ತ ಚಾಂದ್ ನವಾಬ್; ವಿಡಿಯೋ ವೈರಲ್