ನನ್ನ ತಮ್ಮ ಮಂತ್ರಿ ಆಗ್ತಾನೆ: ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್ ವಿಶ್ವಾಸ

Geetha Shivarajkumar: ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಅದಕ್ಕೆ ಮುಖ್ಯ ಕಾರಣ ಗೀತಾ ಸಹೋದರ ಮಧು ಬಂಗಾರಪ್ಪ. ಸೊರಬದಿಂದ ಮಧು ಗೆದ್ದಿದ್ದು ಈ ಬಾರಿ ಅವರು ಸಚಿವರಾಗಲಿದ್ದಾರೆ ಎಂದಿದ್ದಾರೆ ಗೀತಾ.

ಶಿವರಾಜ್ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಈ ಬಾರಿ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಮಾಡಿದರು. ಜೆಡಿಎಸ್​ನಲ್ಲಿದ್ದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡು ಸಹೋದರ ಮಧು ಬಂಗಾರಪ್ಪ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದರು. ಅಂತೆಯೇ ಶಿವರಾಜ್ ಕುಮಾರ್ ಅವರನ್ನೂ ಜೊತೆ ಮಾಡಿಕೊಂಡು ಮಧು ಬಂಗಾರಪ್ಪ ಮಾತ್ರವೇ ಅಲ್ಲದೆ ಕಾಂಗ್ರೆಸ್​ನ ಇನ್ನೂ ಹಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಇದೀಗ ಮಧು ಬಂಗಾರಪ್ಪ ಗೆದ್ದಿದ್ದು, ತಮ್ಮನನ್ನು ಗೆಲ್ಲಿಸಿದವರಿಗೆ ಧನ್ಯವಾದ ಹೇಳಿರುವ ಜೊತೆಗೆ ನನ್ನ ತಮ್ಮ ಸಚಿವ ಆಗಿಯೇ ಆಗುತ್ತಾನೆ ಎಂದಿದ್ದಾರೆ ಗೀತಾ ಶಿವರಾಜ್​ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us