AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಕೇಸ್​​: ಆರೋಪಿಗಳ ಸಂಚು ಬಯಲು

ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಕೇಸ್​​: ಆರೋಪಿಗಳ ಸಂಚು ಬಯಲು

Kiran HV
| Edited By: |

Updated on:May 15, 2026 | 4:05 PM

Share

ಪ್ರಧಾನಿ ಮೋದಿ ಸಂಚಾರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ಸಂಬಂಧ ಆರೋಪಿಗಳ ಸಂಚು ಬಯಲಾಗಿದೆ. ಆರ್ಟ್ ಆಫ್ ಲಿವಿಂಗ್‌ಗೆ ಮೋದಿ ಬರಬಾರದೆಂದು ಪ್ಲಾನ್ ಮಾಡಿದ್ದು, ಪೊಲೀಸರಿಗೆ ಸುಳಿವು ಸಿಗದಂತೆ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ವಿಚಾರ ಟಿವಿ9ಗೆ ಪೊಲೀಸ್​​ ಉನ್ನತ ಮೂಲಗಳಿಂದ ಗೊತ್ತಾಗಿದೆ. ಈ ನಡುವೆ ಆರೋಪಿಗಳಿಗಾಗಿ ಶೋಧ ಮುಂದುವರಿದಿದ್ದು, ಅವರಿಗೆ ಜಿಲೆಟಿನ್​​ ಸಿಕ್ಕಿದ್ದೆಲ್ಲಿಂದ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಬೆಂಗಳೂರು, ಮೇ 15: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ ಸಂಬಂಧ ಆರೋಪಿಗಳ ಸಂಚು ಏನಾಗಿತ್ತು ಎಂಬುದೀಗ ಬಹಿರಂಗಗೊಂಡಿದೆ. ಆರ್ಟ್​ ಆಫ್​ ಲಿವಿಂಗ್​​ ಸ್ಥಳಕ್ಕೆ ಮೋದಿ ಬರಲೇಬಾರದು ಎಂದು ಆರೋಪಿಗಳು ಪ್ಲ್ಯಾನ್​​ ಮಾಡಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಲೀಡ್​​ ಸಿಗದ ಹಾಗೆ ಸಂಚು ರೂಪಿಸಿದ್ದರು ಎಂದು ಟಿವಿ9ಗೆ ಪೊಲೀಸ್​​ ಉನ್ನತ ಮೂಲಗಳು ತಿಳಿಸಿವೆ. ಇನ್ನು ಪ್ರಕರಣ ಸಂಬಂಧ ಈವರೆಗೂ ಬೆಂಗಳೂರು ದಕ್ಷಿಣ ಪೊಲೀಸರು ನೂರಾರು ಜನರ ವಿಚಾರಣೆ ನಡೆಸಿದ್ದು, ಆರೋಪಿಗಳ ಪತ್ತೆಯೇ ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 15, 2026 04:04 PM
Follow Us
Kiran HV
Kiran HV