Ghost Movie: ‘ನಿಜವಾದ ಪ್ಯಾನ್​ ಇಂಡಿಯಾ ಸಿನಿಮಾ ಘೋಸ್ಟ್​’: ಶಿವಣ್ಣನ ಚಿತ್ರಕ್ಕೆ ಇಂದ್ರಜಿತ್​ ಲಂಕೇಶ್​ ಪ್ರತಿಕ್ರಿಯೆ

|

Updated on: Oct 31, 2023 | 1:13 PM

Shivarajkumar: ‘ಘೋಸ್ಟ್​’ ಸಿನಿಮಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಈ ಸಿನಿಮಾ ಸಖತ್​ ಇಷ್ಟ ಆಗಿದೆ. ಇತ್ತೀಚೆಗೆ ಚಿತ್ರದ ಸಕ್ಸಸ್​ ಶೋ ಆಯೋಜಿಸಲಾಗಿತ್ತು. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇಂದ್ರಜಿತ್​ ಲಂಕೇಶ್​ ಅವರು ಈ ಚಿತ್ರದ ಕುರಿತು ಮಾತನಾಡಿದ್ದಾರೆ.

ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಜೋರಾಗಿದೆ. ಇತ್ತೀಚೆಗೆ ಬಿಡುಗಡೆ ಆದ ‘ಘೋಸ್ಟ್​’ ಸಿನಿಮಾ ಕೂಡ ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ (Shivarajkumar) ಅವರು ಎರಡು ಶೇಡ್​ ಇರುವ ಪಾತ್ರ ಮಾಡಿದ್ದಾರೆ. ಶ್ರೀನಿ ನಿರ್ದೇಶನದಲ್ಲಿ ಮೂಡಿಬಂದ ‘ಘೋಸ್ಟ್​’ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಈ ಸಿನಿಮಾ ಸಖತ್​ ಇಷ್ಟ ಆಗಿದೆ. ಇತ್ತೀಚೆಗೆ ‘ಘೋಸ್ಟ್’ (Ghost Movie) ಚಿತ್ರದ ಸಕ್ಸಸ್​ ಶೋ ಆಯೋಜಿಸಲಾಗಿತ್ತು. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಸಿನಿಮಾ ನೋಡಿದ ಬಳಿಕ ಇಂದ್ರಜಿತ್​ ಲಂಕೇಶ್​ ಅವರು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ‘ಶಿವಣ್ಣ ಅವರ ನಟನೆ ಇಷ್ಟ ಆಯಿತು. ಅವರಿಗೆ ಅವರೇ ಸಾಟಿ. ಶ್ರೀನಿ ಹೊಸ ಯುಗದ ನಿರ್ದೇಶಕ. ಅವರ ನಿರೂಪಣೆ ಶೈಲಿ ಭಿನ್ನವಾಗಿದೆ. ನಮ್ಮ ಆತ್ಮೀಯರಾದ ಸಂದೇಶ್ ನಾಗರಾಜ್​ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಇದು ನಿಜವಾದ ಪ್ಯಾನ್​ ಇಂಡಿಯಾ ಸಿನಿಮಾ’ ಎಂದು ಇಂದ್ರಜಿತ್​ ಲಂಕೇಶ್​ (Indrajit Lankesh) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.