Kannada Tattoo: ಹಚ್ಚೇವು ಕನ್ನಡದ ದೀಪ! ಕನ್ನಡ ಪದಗಳ ಉಚಿತ ಟ್ಯಾಟು ಹಾಕಲಾಗುತ್ತದೆ... ಕನ್ನಡದ ಮಕ್ಕಳೆಲ್ಲಾ ಸಾಲಾಗಿ ಬನ್ನೀ!

Kannada Tattoo: ಹಚ್ಚೇವು ಕನ್ನಡದ ದೀಪ! ಕನ್ನಡ ಪದಗಳ ಉಚಿತ ಟ್ಯಾಟು ಹಾಕಲಾಗುತ್ತದೆ… ಕನ್ನಡದ ಮಕ್ಕಳೆಲ್ಲಾ ಸಾಲಾಗಿ ಬನ್ನೀ!

ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on:Oct 31, 2023 | 4:15 PM

ಮೈಸೂರಿನ ಟ್ಯಾಟು ಕಲಾವಿದ ಸುನಿಲ್ ಅವರು ಕುವೆಂಪುನಗರದಲ್ಲಿರುವ ತಮ್ಮ ಟ್ಯಾಟೂ ಇಂಪ್ಯಾಕ್ಟ್ ಸ್ಟುಡಿಯೋದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕನ್ನಡಿಗರು ಕನ್ನಡ ಪ್ರೇಮಿಗಳಿಗಾಗಿ ಉಚಿತವಾಗಿ ಕನ್ನಡ ಪದಗಳ ಟ್ಯಾಟು ಹಾಕಿಕೊಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಕನ್ನಡದ ಪ್ರೀತಿ – ಉಚಿತ ಟ್ಯಾಟು: ಮೈಸೂರಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವದ ಮತ್ತೊಂದು ವಿಶೇಷ ಅಂತ ಹೇಳಿದರೆ ಕನ್ನಡ ಪದಗಳ ಉಚಿತ ಟ್ಯಾಟು. ಹೌದು ಮೈಸೂರಿನ ಟ್ಯಾಟು (ಹಚ್ಚೆ) ಕಲಾವಿದ ಸುನಿಲ್ ಅವರು ಕುವೆಂಪುನಗರದಲ್ಲಿರುವ ತಮ್ಮ ಟ್ಯಾಟೂ ಇಂಪ್ಯಾಕ್ಟ್ ಸ್ಟುಡಿಯೋದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಕನ್ನಡಿಗರು ಕನ್ನಡ ಪ್ರೇಮಿಗಳಿಗಾಗಿ ಉಚಿತವಾಗಿ ಕನ್ನಡ ಪದಗಳ ಟ್ಯಾಟು ಹಾಕಿಕೊಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

 Also Read:  ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

ಬೆಳಗ್ಗೆ 10 ಗಂಟೆಯಿಂದ ರಾತ್ರಿ 7:00 ವರೆಗೂ ಬರುವ ಎಲ್ಲರಿಗೂ ಆಯ್ದ ಕೆಲ ಕನ್ನಡ ಪದಗಳ ಟ್ಯಾಟೂ ಉಚಿತವಾಗಿ ಹಾಕಿ ಕೊಡುತ್ತಾರೆ‌. ಕನ್ನಡಿಗ, ಕನ್ನಡ, ಕನ್ನಡತಿ ಕರ್ನಾಟಕ @ 50 ಕರ್ನಾಟಕದ ಬಾವುಟ ಸೇರಿ ಹಲವು ಟ್ಯಾಟುಗಳು ಉಚಿತವಾಗಿ ಹಾಕಿಕೊಡಲಾಗುತ್ತದೆ. ಇದು ಒಬ್ಬ ಟ್ಯಾಟು ಕಲಾವಿದನಾಗಿ ಕನ್ನಡಕ್ಕಾಗಿ ಸಲ್ಲಿಸುತ್ತಿರುವ ಅಳಿಲುಸೇವೆ ಅನ್ನೋದು ಕಲಾವಿದ ಸುನಿಲ್ ಅವರ ಮಾತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Oct 31, 2023 04:05 PM