Rajyotsava Award 2023 Winners List: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

ರಾಜ್ಯೋತ್ಸವ ಪ್ರಶಸ್ತಿ 2023 ವಿಜೇತರ ಪಟ್ಟಿ: 2023ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾದವರ ವಿವರ ಇಲ್ಲಿದೆ.

Rajyotsava Award 2023 Winners List: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Oct 31, 2023 | 4:08 PM

ಬೆಂಗಳೂರು, ಅಕ್ಟೋಬರ್ 31: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು (Rajyotsava Award 2023 Winners List) ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, 2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ‘ಕರ್ನಾಟಕ ಸಂಭ್ರಮ-50’ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 100 ವರ್ಷ ವಯಸ್ಸು ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಪೈಕಿ ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳ ಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿರಲಿದೆ.

ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜಾನಪದ ಕ್ಷೇತ್ರದಲ್ಲಿ ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್​.ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಮಾಜಸೇವೆ ಕ್ಷೇತ್ರದಲ್ಲಿ 5 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪಾ ನಾಯಕ್, ನಿಜಗುಣಾನಂದ ಸ್ವಾಮೀಜಿ, ಜಿ.ನಾಗರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಡಳಿತ ಕ್ಷೇತ್ರದಲ್ಲಿ ಜಿ.ವಿ.ಬಲರಾಮ್​ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ ಅವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ. ನಾಗಣ್ಣ, ಹೆಚ್​.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ‌‌‌ನೀಡಿ: ಕರ್ನಾಟಕ ಹೈಕೋರ್ಟ್ ಸೂಚನೆ

ಶಿಕ್ಷಣ ಕ್ಷೇತ್ರದಲ್ಲಿ ಮೂವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದ್ರು ಪ್ರಶಸ್ತಿ ವಿಜೇತರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಟಿ.ಎಸ್​. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರವಾರು ಪಟ್ಟಿಯನ್ನು ಇಲ್ಲಿ ನೀಡಲಾಗಿದೆ;

ಚಲನಚಿತ್ರ ಕ್ಷೇತ್ರದಲ್ಲಿ ಇವರಿಗೆಲ್ಲ ರಾಜ್ಯೊತ್ಸವ ಪ್ರಶಸ್ತಿ

  • ಡಿಂಗ್ರಿ ನಾಗರಾಜ್
  • ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಎ.ಜಿ. ಚಿದಂಬರ ರಾವ್ ಜಂಬೆ
  • ಪಿ. ಗಂಗಾಧರ ಸ್ವಾಮಿ
  • ಹೆಚ್.ಬಿ.ಸರೋಜಮ್ಮ
  • ತಯ್ಯಬಖಾನ್ ಎಂ.ಇನಾಮದಾರ
  • ಡಾ.ವಿಶ್ವನಾಥ್ ವಂಶಾಕೃತ ಮಠ
  • ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಡಾ.ನಯನ ಎಸ್.ಮೋರೆ
  • ನೀಲಾ ಎಂ ಕೊಡ್ಲಿ
  • ಶಬ್ಬೀರ್ ಅಹಮದ್
  • ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

  • ಟಿ.ಶಿವಶಂಕರ್
  • ಕಾಳಪ್ಪ ವಿಶ್ವಕರ್ಮ
  • ಮಾರ್ಥಾ ಜಾಕಿಮೋವಿಚ್
  • ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ

  • ಅರ್ಗೋಡು ಮೋಹನದಾಸ ಶೆಣೈ
  • ಕೆ. ಲೀಲಾವತಿ ಬೈಪಾಡಿತ್ತಾಯ
  • ಕೇಶಪ್ಪ ಶಿಳ್ಳಿಕ್ಯಾತರ
  • ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
  • ಶಿವಂಗಿ ಶಣ್ಮರಿ
  • ಮಹದೇವು
  • ನರಸಪ್ಪಾ
  • ಶಕುಂತಲಾ ದೇವಲಾನಾಯಕ
  • ಎಚ್‌.ಕೆ ಕಾರಮಂಚಪ್ಪ
  • ಶಂಭು ಬಳಿಗಾರ
  • ವಿಭೂತಿ ಗುಂಡಪ್ಪ
  • ಚೌಡಮ್ಮ

ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಹುಚ್ಚಮ್ಮ ಬಸಪ್ಪ ಚೌದ್ರಿ
  • ಚಾರ್ಮಾಡಿ ಹಸನಬ್ಬ
  • ಕೆ.ರೂಪ್ಲಾ ನಾಯಕ್
  • ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
  • ನಾಗರಾಜು.ಜಿ

ಆಡಳಿತ ಕ್ಷೇತ್ರ

  • ಬಲರಾಮ್, ತುಮಕೂರು

ವೈದ್ಯಕೀಯ ಕ್ಷೇತ್ರ

  • ಡಾ.ಸಿ. ರಾಮಚಂದ್ರ, ಬೆಂಗಳೂರು
  • ಡಾ.ಪ್ರಶಾಂತ್, ದ.ಕನ್ನಡ

ಸಾಹಿತ್ಯ ಕ್ಷೇತ್ರ

  • ಪ್ರೊ. ಸಿ.ನಾಗಣ್ಣ, ಚಾಮರಾಜನಗರ
  • ಸುಬ್ಬು ಹೊಲೆಯಾರ್, ಹಾಸನ
  • ಸತೀಶ್ ಕುಲಕರ್ಣಿ, ಹಾವೇರಿ
  • ಲಕ್ಷ್ಮೀಪತಿ ಕೋಲಾರ
  • ಪರಪ್ಪ ಗುರುಪಾದಪ್ಪ ಸಿದ್ದಾಪುರ
  • ಡಾ. ಕೆ ಷರೀಫಾ

ಶಿಕ್ಷಣ ಕ್ಷೇತ್ರ

  • ರಾಮಪ್ಪ, ರಾಯಚೂರು
  • ಕೆ.ಚಂದ್ರಶೇಖರ್, ಕೋಲಾರ
  • ಕೆ.ಟಿ ಚಂದು, ಮಂಡ್ಯ

ಕ್ರೀಡಾ ಕ್ಷೇತ್ರ

  • ಟಿ.ಎಸ್​. ದಿವ್ಯಾ
  • ಅದಿತಿ ಅಶೋಕ್
  • ಅಶೋಕ್ ಗದಿಗೆಪ್ಪ ಏಣಗಿ

ಪರಿಸರ ಕ್ಷೇತ್ರ

  • ಸೋಮನಾಥ ರೆಡ್ಡಿ ಪೂರ್ಮಾ
  • ದ್ಯಾವನಗೌಡ ಟಿ ಪಾಟೀಲ
  • ಶಿವರೆಡ್ಡಿ ಹನುಮರೆಡ್ಡಿ ವಾಸನ

ನ್ಯಾಯಾಂಗ ಕ್ಷೇತ್ರ

  • ಜ. ವಿ ಗೋಪಾಲ ಗೌಡ

ಸಂಕೀರ್ಣ ಕ್ಷೇತ್ರ

  • ಎಂಎಂ ಮದರಿ
  • ಹಾಜಿ ಅಬ್ದುಲ್ಲಾ, ಪರ್ಕಳ
  • ಮಿಮಿಕ್ರಿ ದಯಾನಂದ್
  • ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
  • ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ ಕ್ಷೇತ್ರ

  • ದಿನೇಶ ಅಮೀನ್​​ಮಟ್ಟು
  • ಜವರಪ್ಪ
  • ಮಾಯಾ ಶರ್ಮ
  • ರಫೀ ಭಂಡಾರಿ

ವಿಜ್ಞಾನ ಮತ್ತು ತಂತ್ರಜ್ಞಾನ

  • ಎಸ್​​​. ಸೋಮನಾಥನ್​​​​ ಶ್ರೀಧರ್​​ ಪನಿಕರ್​​​
  • ಪ್ರೊ. ಗೋಪಾಲನ್ ಜಗದೀಶ್

ಹೊರನಾಡು ಮತ್ತು ಹೊರದೇಶ

  • ಸೀತಾರಾಮ ಅಯ್ಯಂಗಾರ್​​​​
  • ದೀಪಕ್​​​ ಶೆಟ್ಟಿ
  • ಶಶಿಕಿರಣ್​​​​ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

  • ಪುಟ್ಟಸ್ವಾಮಿ ಗೌಡ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು

  • ಕರ್ನಾಟಕ ಸಂಘ, ಶಿವಮೊಗ್ಗ
  • ಬಿ.ಎನ್​.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
  • ಮಿಥಿಕ್ ಸೊಸೈಟಿ, ಬೆಂಗಳೂರು
  • ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
  • ಮೌಲಾನಾ ಆಜಾದ್ ಶಿಕ್ಷಣ & ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ
  • ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ
  • ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
  • ಚಿಣ್ಣರಬಿಂಬ, ಮುಂಬೈ
  • ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
  • ವಿದ್ಯಾದಾನ ಸಮಿತಿ, ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Tue, 31 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್