ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ಗೆಲ್ಲೋದು ಪಕ್ಕಾನಾ? ಹೀಗೊಂದು ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಅದು ಸ್ಪಷ್ಟವಾಗುತ್ತಿದೆ. ಬಿಗ್ ಬಾಸ್ಗೂ ಇದೇ ರೀತಿ ಅನಿಸುತ್ತಾ ಇದೆ. ‘ಗಿಲ್ಲಿ ಗೆಲ್ಲೋದು ಪಕ್ಕಾ’ ಎಂಬ ಘೋಷಣೆಯನ್ನು ಜನರೇ ಕೂಗಿದ್ದಾರೆ.
‘ಬಿಗ್ ಬಾಸ್’ ಫಿನಾಲೆ ವಾರ ನಡೆಯುತ್ತಿದೆ. ಈ ವೇಳೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಚಿಯರ್ ಮಾಡಿದರು. ಇನ್ನು, ಗಿಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಕೂಡ ಆಗಮಿಸಿದ್ದರು. ಇದನ್ನು ನೋಡಿ ಗಿಲ್ಲಿ ಭಾವುಕರಾದರು. ಅಲ್ಲದೆ, ‘ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಿಸೋ ತಾಕತ್ತು ಇರೋದು ಜೋಕರ್ಗೆ ಮಾತ್ರ’ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ, ‘ಡಮಾಲ್ ಡಿಮಿಲ್ ಡಕ್ಕಾ ಗಿಲ್ಲಿ ಗೆಲ್ಲೋದು ಪಕ್ಕಾ’ ಎಂದು ನೆರೆದಿದ್ದವರು ಕೂಗಿದರು. ಬಿಗ್ ಬಾಸ್ ಮನೆಯಲ್ಲೇ ಅವರು ಗೆಲ್ಲೋ ಸೂಚನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
