ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕ್ಯಾಪ್ಟನ್ ಕೊಟ್ಟ ಶಿಕ್ಷೆ ಘನಘೋರ
Bigg Boss New Episode: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ಅಶ್ವಿನಿ ಜೊತೆ ಜಗಳ ಆಡಿದ್ದಾರೆ. ಅಶ್ವಿನಿ ಅವರಿಗೆ ಘನಘೋರ ಶಿಕ್ಷೆ ನೀಡಲಾಗಿದೆ. ಈ ಸಂದರ್ಭದ ಪ್ರೋಮೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಅಶ್ವಿನಿ ಹಾಗೂ ಗಿಲ್ಲಿ ನಡುವಿನ ಸಂಬಂಧ ಆಗಾಗ ಹಳಸುತ್ತದೆ, ಮತ್ತೆ ಸರಿ ಆಗುತ್ತದೆ. ಇತ್ತೀಚೆಗೆ ಇಬ್ಬರೂ ಒಂದಾಗಿದ್ದರು. ಈಗ ಕೆಲಸದ ವಿಷಯಕ್ಕೆ ಫೈಟ್ ನಡೆದಿದೆ. ಅಶ್ವಿನಿ ಅವರು ಅಡುಗೆ ಮನೆ ಕ್ಲೀನ್ ಮಾಡೋ ಕೆಲಸ ಮಾಡಿಲ್ಲ. ಇದನ್ನು ಪ್ರಸ್ತಾಪಿಸಿದಾಗ ‘ನಾನು ಮಾಡಲ್ಲ’ ಎಂದು ನೇರವಾಗಿ ಹೇಳಿದರು. ಈ ವೇಳೆ ಜಗಳ ನಡೆದಿದೆ. ಆ ಬಳಿಕ ಗಿಲ್ಲಿ ಅವರು ‘ರಾತ್ರಿ ನಿದ್ರಿಸೋಕೆ ಕೊಡಲ್ಲ’ ಎಂದು ಹೇಳಿದರು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ. ರಾತ್ರಿ ಪಾತ್ರೆ ಶಬ್ದ ಮಾಡಿ ಅಶ್ವಿನಿಗೆ ನಿದ್ದೆ ಮಾಡೋಕೆ ಬಿಟ್ಟಿಲ್ಲ. ಈ ಘನಘೋರ ಶಿಕ್ಷೆಗೆ ಅಶ್ವಿನಿ ನಲುಗಿ ಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 29, 2025 08:24 AM
Latest Videos

