ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಮಳವಳ್ಳಿಯಲ್ಲಿ ಜನರ ನಿಯಂತ್ರಿಸಲು ಖಾಕಿ ಹರಸಾಹಸ
ಬಿಗ್ ಬಾಸ್ ಮನೆಯಿಂದ ಗಿಲ್ಲಿ ನಟ ಹೊರಗೆ ಬಂದರೆ ಹೊತ್ತು ಮೆರೆಸುವುದಾಗಿ ಜನರು ಹೇಳಿದ್ದರು. ಅದರಂತೆಯೇ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada 12) ಮನೆಯಿಂದ ಹೊರಗೆ ಬಂದರೆ ಹೊತ್ತು ಮೆರೆಸುವುದಾಗಿ ಜನರು ಹೇಳಿದ್ದರು. ಈಗ ಅದರಂತೆಯೇ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದಿದ್ದಾರೆ. ಅವರನ್ನು ನೋಡಲು ಮಳವಳ್ಳಿ (Malavalli) ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿದೆ. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ (Gilli Nata) ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಎಲ್ಲೆಲ್ಲೂ ಗಿಲ್ಲಿ ನಟನ ಅಭಿಮಾನಿಗಳೇ ತುಂಬಿಕೊಂಡಿದ್ದಾರೆ. ಮಕ್ಕಳು, ವೃದ್ಧರು, ಯುವಕ-ಯುವತಿಯರು ಗಿಲ್ಲಿಗೆ ಜೈಕಾರ ಕೂಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
