ಯುಎಇ ಅಧ್ಯಕ್ಷರಿಗೆ ಉಡುಗೊರೆಯಾಗಿ ಕುಸುರಿ ಕೆತ್ತನೆಯ ಮರದ ಉಯ್ಯಾಲೆ ನೀಡಿದ ಮೋದಿ
ಭಾರತಕ್ಕೆ ಕೇವಲ 2 ಗಂಟೆಗಳ ಭೇಟಿಗೆ ಆಗಮಿಸಿದ್ದ ಯುಎಇ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಮರೆಯಲಾಗದ ಉಡುಗೊರೆ ನೀಡಿದ್ದಾರೆ. ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ನೀಡಲಾಯಿತು. ಅದನ್ನು ಹೂವಿನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಕೈಯಿಂದ ಕೆತ್ತಲಾಗಿದೆ. ಗುಜರಾತಿ ಸಂಸ್ಕೃತಿಯಲ್ಲಿ ತಲೆಮಾರುಗಳಾದ್ಯಂತ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಪ್ರತಿನಿಧಿಸುವ ಈ ಉಯ್ಯಾಲೆಯ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲನ್ನು ಸಹ ಉಡುಗೊರೆಯಾಗಿ ನೀಡಲಾಯಿತು.
ನವದೆಹಲಿ, ಜನವರಿ 19: 2 ಗಂಟೆಗಳ ಭಾರತದ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮರದ ಕೆತ್ತನೆಯ ಉಯ್ಯಾಲೆ ಮತ್ತು ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಬರಮಾಡಿಕೊಂಡರು. ಬಳಿಕ ಅವರು ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸವಾದಲ್ಲಿ ಸಭೆ ನಡೆಸಿದರು. ತಮ್ಮ ಅತಿ ಸಣ್ಣ ಭೇಟಿಯನ್ನು ಮುಗಿಸಿಕೊಂಡು ವಾಪಾಸ್ ಹೊರಟ ಯುಎಇ ಅಧ್ಯಕ್ಷರಿಗೆ ವಿಶೇಷವಾದ ಉಡುಗೊರೆ ನೀಡಲಾಯಿತು.
ಗುಜರಾತಿನ ಕರಕುಶಲಕರ್ಮಿಗಳು ಕೆತ್ತಿದ ಮರದ ಉಯ್ಯಾಲೆಯನ್ನು ಯುಎಇ ಅಧ್ಯಕ್ಷರಿಗೆ ನೀಡಲಾಯಿತು. ಅದನ್ನು ಹೂವಿನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳೊಂದಿಗೆ ಕೈಯಿಂದ ಕೆತ್ತಲಾಗಿದೆ. ಗುಜರಾತಿ ಸಂಸ್ಕೃತಿಯಲ್ಲಿ ತಲೆಮಾರುಗಳಾದ್ಯಂತ ಒಗ್ಗಟ್ಟು ಮತ್ತು ಬಾಂಧವ್ಯವನ್ನು ಪ್ರತಿನಿಧಿಸುವ ಈ ಉಯ್ಯಾಲೆಯ ಜೊತೆಗೆ ಕಾಶ್ಮೀರದ ಪಶ್ಮಿನಾ ಶಾಲನ್ನು ಸಹ ಉಡುಗೊರೆಯಾಗಿ ನೀಡಲಾಯಿತು. ಈ ಶಾಲನ್ನು ತುಂಬಾ ಉತ್ತಮವಾದ ಉಣ್ಣೆಯನ್ನು ಬಳಸಿ ಕೈಯಿಂದ ನೇಯಲಾಗಿದ್ದು, ಇದು ಮೃದು ಮತ್ತು ಬೆಚ್ಚಗಿರುತ್ತದೆ ಇದನ್ನು ತೆಲಂಗಾಣದಲ್ಲಿ ತಯಾರಿಸಲಾದ ಅಲಂಕಾರಿಕ ಬೆಳ್ಳಿ ಪೆಟ್ಟಿಗೆಯಲ್ಲಿ ಇರಿಸಿ ನೀಡಲಾಗಿದೆ. ಇದು ಭಾರತದ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

