ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..
ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ ಮೊದಲಿನಿಂದಲೂ ಪೈಪೋಟಿ ಇದೆ. 14ನೇ ವಾರದಲ್ಲಿ ಸಹ ಆ ಸ್ಪರ್ಧೆ ಮುಂದುವರಿದಿದೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ಪರಸ್ಪರ ಟಕ್ಕರ್ ಕೊಟ್ಟುಕೊಳ್ಳುತ್ತಿದ್ದಾರೆ. ಡಿಸೆಂಬರ್ 30ರ ಸಂಚಿಕೆಯಲ್ಲಿಯೂ ಅದೇ ರೀತಿ ಆಗಿದೆ. ಪ್ರೋಮೋ ನೋಡಿ..
ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅದರಂತೆ ನಡೆದಿದೆ. ಮೊದಲಿನಿಂದಲೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನಡುವೆ ಟಫ್ ಪೈಪೋಟಿ ಇದೆ. 14ನೇ ವಾರದಲ್ಲಿ ಕೂಡ ಆ ಸ್ಪರ್ಧೆ ಮುಂದುವರಿದಿದೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಪರಸ್ಪರ ಟಕ್ಕರ್ ಕೊಟ್ಟುಕೊಳ್ಳುತ್ತಿದ್ದಾರೆ. ಡಿಸೆಂಬರ್ 30ರ ಸಂಚಿಕೆಯಲ್ಲಿಯೂ ಅದೇ ರೀತಿ ಆಗಿದೆ. ರಾಜನ ಗೆಟಪ್ ಧರಿಸಿದ್ದ ಗಿಲ್ಲಿ ನಟ ಮಂಕಾಗಿದ್ದರು. ರಾಣಿಯಾಗಿ ಅಶ್ವಿನಿ ಗೌಡ ಅವರು ಪ್ರಚೋದಿಸುವ ಪ್ರಯತ್ನ ಮಾಡಿದರು. ‘ನಿನ್ನೆ ಇದ್ದ ಜೋಶ್ ಇಂದು ಕಾಣುತ್ತಿಲ್ಲ’ ಎಂದು ಕೆಣಕಿದರು. ಆಗ ಗಿಲ್ಲಿ ನಟ (Gilli Nata) ಅವರು ಆ್ಯಟಿಟ್ಯೂಡ್ ತೋರಿಸಿದ್ದಾರೆ. ಕಾದು ನೋಡುವ ತಂತ್ರವನ್ನು ಗಿಲ್ಲಿ ನಟ ಉಪಯೋಗಿಸಿದ್ದಾರೆ. ಡಿ.30ರ ಸಂಚಿಕೆಯ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
