ರಕ್ಷಿತಾ ಶೆಟ್ಟಿ ಸಲುವಾಗಿ ಅಶ್ವಿನಿ ಗೌಡ ವಿರುದ್ಧ ತಿರುಗಿ ಬಿದ್ದ ಗಿಲ್ಲಿ ನಟ
ಬಿಗ್ ಬಾಸ್ ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದಾರೆ. ಅವರನ್ನು ಅಶ್ವಿನಿ ಗೌಡ ಟಾರ್ಗೆಟ್ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯ ಕೆಲವರು ರಕ್ಷಿತಾ ಶೆಟ್ಟಿ ಪರವಾಗಿ ನಿಂತಿದ್ದಾರೆ. ಗಿಲ್ಲಿ ನಟ ಮೊದಲಿನಿಂದಲೂ ರಕ್ಷಿತಾ ಶೆಟ್ಟಿ ಪರ ವಹಿಸುತ್ತಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದಾರೆ. ಅವರನ್ನು ಅಶ್ವಿನಿ ಗೌಡ ಟಾರ್ಗೆಟ್ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ರಕ್ಷಿತಾ ಶೆಟ್ಟಿ (Rakshitha Shetty) ಪರವಾಗಿ ಬಿಗ್ ಬಾಸ್ ಮನೆಯ ಕೆಲವರು ನಿಂತಿದ್ದಾರೆ. ಗಿಲ್ಲಿ ನಟ ಅವರು ಮೊದಲಿನಿಂದಲೂ ರಕ್ಷಿತಾ ಪರ ವಹಿಸುತ್ತಿದ್ದಾರೆ. ನವೆಂಬರ್ 3ರ ಸಂಚಿಕೆಯಲ್ಲಿ ಕೂಡ ಇದೇ ರೀತಿ ಆಗಿದೆ. ಈ ಮೊದಲು ರಕ್ಷಿತಾ ಶೆಟ್ಟಿ ಹೇಳಿದ್ದ ಮಾತನ್ನು ಅಶ್ವಿನಿ ಗೌಡ ಅವರು ತಮಗೆ ಬೇಕಾದಂತೆ ತಿರುಚಿದ್ದರು. ಆ ವಿಚಾರಕ್ಕೆ ಗಿಲ್ಲಿ ನಟ (Gilli Nata) ವಿರೋಧ ವ್ಯಕ್ತಪಡಿಸಿದ್ದಾರೆ. ಸಾಕ್ಷಿ ಸಮೇತವಾಗಿ ಅಶ್ವಿನಿ ಗೌಡ ಅವರ ತಪ್ಪನ್ನು ಗುರುತಿಸಿ ಬಳಿಕ ಅವರ ಮುಖಕ್ಕೆ ಗಿಲ್ಲಿ ನಟ ಮಸಿ ಬಳಿದಿದ್ದಾರೆ. ನ.3ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
