ತೆಲಂಗಾಣದಲ್ಲಿ ಬಸ್ ಅಪಘಾತ; ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ತೆಲಂಗಾಣದ ಚೆವೆಲ್ಲಾ ಬಸ್ ಅಪಘಾತದಲ್ಲಿ ಇಲ್ಲಿಯವರೆಗೆ 19 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇತರ ಮೂವರ ಸ್ಥಿತಿ ಗಂಭೀರವಾಗಿದೆ. ಅಧಿಕಾರಿಗಳು ಅಧಿಕೃತವಾಗಿ ಅಪಘಾತದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇಂದು ಬೆಳಿಗ್ಗೆ 4.40ಕ್ಕೆ ತಂದೂರಿನಿಂದ ಹೈದರಾಬಾದ್‌ಗೆ ಹೊರಟ H-003 ಸರ್ವಿಸ್ ನಂಬರ್ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. ಬೆಳಿಗ್ಗೆ 6.15ಕ್ಕೆ ಚೆವೆಲ್ಲಾದ ಇಂದ್ರರೆಡ್ಡಿನಗರ ತಲುಪಿದಾಗ ಅಪಘಾತ ಸಂಭವಿಸಿದೆ.
ನವದೆಹಲಿ, ನವೆಂಬರ್ 3: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 19 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರವನ್ನು ಕೂಡ ಘೋಷಿಸಿದ್ದಾರೆ.
ಇಂದು ಬೆಳಿಗ್ಗೆ 4.40ಕ್ಕೆ ತಂದೂರಿನಿಂದ ಹೈದರಾಬಾದ್‌ಗೆ ಹೊರಟ H-003 ಸರ್ವಿಸ್ ನಂಬರ್ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು. ಬೆಳಿಗ್ಗೆ 6.15ಕ್ಕೆ ಚೆವೆಲ್ಲಾದ ಇಂದ್ರರೆಡ್ಡಿನಗರ ತಲುಪಿದಾಗ ಅಪಘಾತ ಸಂಭವಿಸಿದೆ. 17 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದರು. ಇನ್ನೂ 20 ಜನರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಬಸ್ ಅತಿ ವೇಗದಲ್ಲಿ ಜಲ್ಲಿಕಲ್ಲು ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಲ್ಲಿಕಲ್ಲುಗಳೆಲ್ಲ ಬಸ್ನೊಳಗೆ ಬಿದ್ದಿದೆ. ಅದರಡಿ ಸಿಲುಕಿ ಅನೇಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

