ಬಿಜೆಪಿಯ ಚೇಲಾಗೆ ಸಿಎಂ ಸ್ಥಾನ ಕೊಡುತ್ತಾರೆಯೇ ವಿನಃ ನಿತೀಶ್ ಕುಮಾರ್ಗೆ ಕೊಡೋದಿಲ್ಲ; ಮಲ್ಲಿಕಾರ್ಜುನ ಖರ್ಗೆ ಟೀಕೆ
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ದೀರ್ಘಾವಧಿಯ ಅಧಿಕಾರಾವಧಿಯನ್ನು ಗುರಿಯಾಗಿಸಿಕೊಂಡು, ಎರಡು ದಶಕಗಳ ಆಡಳಿತದಲ್ಲಿ ಅವರು ಜನರ ಜೀವನವನ್ನು ಸುಧಾರಿಸಲು ಸ್ವಲ್ಪವೂ ಮಾಡಿಲ್ಲ ಎಂದು ಹೇಳಿದರು. "ಅವರು 9 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಮತ್ತು ಇಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ, ಆದರೂ ಅವರು ಉದ್ಯೋಗಗಳನ್ನು ಒದಗಿಸಲು ಅಥವಾ ಬಿಹಾರದ ಯುವಕರ ವಲಸೆಯನ್ನು ನಿಲ್ಲಿಸಲು ವಿಫಲರಾಗಿದ್ದಾರೆ" ಎಂದು ಖರ್ಗೆ ಹೇಳಿದ್ದಾರೆ.
ಪಾಟ್ನಾ, ನವೆಂಬರ್ 3: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಇಂದು “ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅಧಿಕಾರಕ್ಕಾಗಿ ಬಿಜೆಪಿಗೆ ಶರಣಾಗಿದ್ದಾರೆ. ಸಿಎಂ ಆಗುವ ಆಸೆಯಿಂದ ಅವರು ಬಿಜೆಪಿಯ ತೊಡೆ ಮೇಲೆ ಹತ್ತಿ ಕುಳಿತಿದ್ದಾರೆ. ಆದರೆ, ಬಿಜೆಪಿ ಖಂಡಿತವಾಗಿಯೂ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ. ತಮ್ಮ ಚೇಲಾಗೆ ಸಿಎಂ ಹುದ್ದೆಯನ್ನು ನೀಡುತ್ತದೆಯೇ ವಿನಃ ನಿತೀಶ್ ಕುಮಾರ್ ಅವರಿಗೆ ಆ ಸ್ಥಾನ ನೀಡುವುದಿಲ್ಲ. ಅದೇ ಕಾರಣಕ್ಕೆ ಬಿಜೆಪಿಯ ಪ್ರಚಾರ, ರೋಡ್ ಶೋಗಳೆಲ್ಲೂ ನಿತೀಶ್ ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ” ಎಂದು ಹೇಳಿದ್ದಾರೆ.
“ನಿತೀಶ್ ಕುಮಾರ್ ಮಹಿಳೆಯರ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಿದ್ದಾರೆ. ಇದರಿಂದ ತಮಗೆ ಮತಗಳು ಸಿಗುತ್ತವೆ ಎಂದು ಅವರು ಭಾವಿಸಿದ್ದಾರೆ. ಬಿಹಾರದ ಜನರು ಬುದ್ಧಿವಂತರು. 10,000 ರೂ.ಗಳಲ್ಲ ನೀವು 10 ಲಕ್ಷ ರೂ.ಗಳನ್ನು ಜಮಾ ಮಾಡಿದರೂ ಸಹ ಅವರು ಯೋಚನೆ ಮಾಡಿಯೇ ಮತ ಹಾಕುತ್ತಾರೆ. ಮಹಿಳೆಯರಿಗೆ 10,000 ರೂಪಾಯಿಗಳನ್ನು ನೀಡುವ ಬಗ್ಗೆ ಕಳೆದ 20 ವರ್ಷಗಳ ಕಾಲ ಅವರ ಮನಸ್ಸಿನಲ್ಲಿ ಬರಲಿಲ್ಲವೇ? 11 ವರ್ಷಗಳ ಕಾಲ ಅಧಿಕಾರ ನಡೆಸಿದ ಪ್ರಧಾನಿ ಮೋದಿಯವರ ಮನಸ್ಸಿನಲ್ಲಿಯೂ ಆ ವಿಷಯ ಬರಲಿಲ್ಲವೇ? ಇವೆಲ್ಲವೂ ಚುನಾವಣಾ ಭರವಸೆಗಳಷ್ಟೆ. ಪ್ರಧಾನಿ ಮೋದಿ ಮತ್ತು ಅವರ ಸ್ನೇಹಿತ ನಿತೀಶ್ ಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

