RSS ಪರೇಡ್ಗೆ ಏಕೆ ಅನುಮತಿ ಕೊಡ್ಬೇಕು?: ಸಚಿವ ಪ್ರಿಯಾಂಕ್ ಖರ್ಗೆ ಗರಂ
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಕಾನೂನು ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಯಾರೂ ಕಾನೂನಿಗೆ ಅತೀತವಲ್ಲ ಎಂದು ಹೇಳಿರುವ ಅವರು, ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಣಿ ಎಂದು ಟೀಕಿಸಿದ್ದಾರೆ. ಎಂಇಎಸ್‌ಗೆ ಭದ್ರತೆ ನೀಡುವ ಸಂದರ್ಭದಲ್ಲಿ ಆರ್‌ಎಸ್‌ಎಸ್‌ಗೆ ವಿಶೇಷ ಪರಿಗಣನೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ನವೆಂಬರ್ 2: ಆರ್‌ಎಸ್‌ಎಸ್ ವಿರುದ್ಧ ಮತ್ತೊಮ್ಮೆ ಗರಂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ, RSS ಪರೇಡ್ಗೆ ಏಕೆ ಅನುಮತಿ ಕೊಡ್ಬೇಕು ಎಂದು ಗುಡುಗಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧದ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಾರೂ ಕಾನೂನಿಗೆ ಅಥವಾ ಸಂವಿಧಾನಕ್ಕೆ ಅತೀತವಾಗಿಲ್ಲ ಎಂದ ಅವರು, ಆರ್‌ಎಸ್‌ಎಸ್ ಮಾತ್ರ ಇದಕ್ಕೆ ಹೊರತೇ ಎಂದು ಕೇಳಿದ್ದಾರೆ. ಬಿಜೆಪಿಯನ್ನು ಆರ್‌ಎಸ್‌ಎಸ್‌ನ “ಗುಲಾಮರು” ಎಂದು ಬಣ್ಣಿಸಿದ ಖರ್ಗೆ, ನೂರು ವರ್ಷಗಳ ಆರ್‌ಎಸ್‌ಎಸ್ ಕುರಿತ ಬಿಜೆಪಿ ಬಿಡುಗಡೆ ಮಾಡಿದ ಇನ್ಫೋಗ್ರಾಫಿಕ್‌ನಲ್ಲಿ ರಾಜಕೀಯ ವಿಭಾಗವಾಗಿ ಬಿಜೆಪಿ ಹೆಸರಿಸಲ್ಪಟ್ಟಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಕಾನೂನಿನ ಪ್ರಕಾರವೇ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

