ಗಿಲ್ಲಿನೇ ಬಿಗ್ ಬಾಸ್ ಟ್ರೋಫಿ ಗೆಲ್ಲೋದು: ಭವಿಷ್ಯ ನುಡಿದ ಜಾಹ್ನವಿ
‘ಬಿಗ್ ಬಾಸ್ ಕನ್ನಡ’ ಶೋನಿಂದ ಜಾಹ್ನವಿ ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಟಿವಿ9 ಜತೆ ಮಾತನಾಡಿದ್ದಾರೆ. ಈ ವೇಳೆ ಯಾರು ಫೈನಲಿಸ್ಟ್ ಮತ್ತು ಯಾರು ವಿನ್ನರ್ ಎಂಬ ಪ್ರಶ್ನೆಗೆ ಜಾಹ್ನವಿ ಉತ್ತರ ನೀಡಿದ್ದಾರೆ. ಗಿಲ್ಲಿ, ಅಶ್ವಿನಿ ಮತ್ತು ರಕ್ಷಿತಾ ಟಾಪ್ 3 ಸ್ಪರ್ಧಿಗಳಾಗಿ ಇರುತ್ತಾರೆ ಎಂದು ಜಾಹ್ನವಿ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಿಂದ ಜಾಹ್ನವಿ ಅವರು ಎಲಿಮಿನೇಟ್ ಆಗಿದ್ದಾರೆ. ಬಳಿಕ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಯಾರು ಫೈನಲಿಸ್ಟ್ ಹಾಗೂ ಯಾರು ವಿನ್ನರ್ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಗಿಲ್ಲಿ ನಟ (Gilli Nata), ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಅವರು ಟಾಪ್ 3 ಸ್ಪರ್ಧಿಗಳಾಗಿ ಇರುತ್ತಾರೆ ಎಂದು ಜಾಹ್ನವಿ ಹೇಳಿದ್ದಾರೆ. ‘ಬಿಗ್ ಬಾಸ್ ಒಂದು ವ್ಯಕ್ತಿತ್ವದ ಆಟ. ಅಶ್ವಿನಿ ಗೌಡ ಅವರು ಅರ್ಹರಾಗಿದ್ದಾರೆ. ಗಿಲ್ಲಿ ಎಲ್ಲರನ್ನೂ ನಗಿಸುತ್ತಾನೆ, ಜನರಿಗೆ ಇಷ್ಟ ಆಗಿದ್ದಾನೆ ಎಂಬುದು ಬೇರೆ. ಅವನಲ್ಲಿ ಕಾಮಿಡಿ ಬಿಟ್ಟರೆ ಬೇರೆ ಯಾವುದೇ ಭಾವನೆಯನ್ನು ನಾವು ನೋಡಿಲ್ಲ. ಬರೀ ಕಾಮಿಡಿ ಆಯಾಮದಿಂದ ಗೆದ್ದರೆ ಅದಕ್ಕೆ ಅರ್ಥ ಇರೋದಿಲ್ಲ. ಆದರೆ ಗೆಲ್ಲೋದು ಅವನೇ. ನನಗೆ ಅಶ್ವಿನಿ ಗೌಡ ಅವರು ಗೆಲ್ಲಬೇಕು’ ಎಂದು ಜಾಹ್ನವಿ (Jahnavi) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
