AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ ಗೌಡ ದುಡ್ಡಿನ ಮೇಲೆ ಕಣ್ಣಿಟ್ಟ ಜಾಹ್ನವಿ? ದೊಡ್ಡ ಆರೋಪ ಮಾಡಿದ ಧ್ರುವಂತ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆದಾಗಿನಿಂದ ಅಶ್ವಿನಿ ಗೌಡ ಜೊತೆ ಜಾಹ್ನವಿ ಸ್ನೇಹಮಯವಾಗಿ ಇದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಧ್ರುವಂತ್ ಅವರು ಊಹಿಸಿಕೊಂಡಿದ್ದಾರೆ. ಗಿಲ್ಲಿ ನಟ ಜೊತೆ ಅದನ್ನು ಚರ್ಚಿಸಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಲಾಭ ಆಗುತ್ತೆ ಎಂಬ ಕಾರಣಕ್ಕೆ ಅಶ್ವಿನಿ ಜೊತೆ ಜಾಹ್ನವಿ ಇದ್ದಾರೆ ಎಂದಿದ್ದಾರೆ ಧ್ರುವಂತ್.

ಅಶ್ವಿನಿ ಗೌಡ ದುಡ್ಡಿನ ಮೇಲೆ ಕಣ್ಣಿಟ್ಟ ಜಾಹ್ನವಿ? ದೊಡ್ಡ ಆರೋಪ ಮಾಡಿದ ಧ್ರುವಂತ್
Gilli Nata, Jahnavi, Ashwini Gowda
ಮದನ್​ ಕುಮಾರ್​
|

Updated on: Nov 24, 2025 | 10:26 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಧ್ರುವಂತ್ (Dhruvanth) ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಕಳೆದ ವಾರದಿಂದ ಅಶ್ವಿನಿ ಗೌಡ (Ashwini Gowda) ಜೊತೆ ಧ್ರುವಂತ್ ಕಿರಿಕ್ ಶುರುವಾಗಿದೆ. ಈಗ ಅವರು ಗಿಲ್ಲಿ ನಟ ಜೊತೆ ಒಂದು ವಿಷಯವನ್ನು ಚರ್ಚೆ ಮಾಡಿದ್ದಾರೆ. ಎಷ್ಟೇ ಜಗಳ ಆದರೂ ಅಶ್ವಿನಿ ಗೌಡ ಅವರನ್ನು ಜಾಹ್ನವಿ ಯಾಕೆ ಬಿಟ್ಟುಕೊಡುತ್ತಿಲ್ಲ ಎಂಬುದನ್ನು ಧ್ರುವಂತ್ ವಿವರಿಸಿದ್ದಾರೆ. ಅಶ್ವಿನಿ ಗೌಡ ಅವರ ದುಡ್ಡಿಗಾಗಿ ಜಾಹ್ನವಿ (Gilli Nata) ಈ ರೀತಿ ಮಾಡುತ್ತಿದ್ದಾರೆ ಎಂಬ ಅರ್ಥ ಬರುವ ರೀತಿಯಲ್ಲಿ ಧ್ರುವಂತ್ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ 56ನೇ ದಿನ ಗಿಲ್ಲಿ ನಟನ ಜೊತೆ ಧ್ರುವಂತ್ ಈ ರೀತಿ ಚರ್ಚಿಸಿದ್ದಾರೆ. ‘ಜಾಹ್ನವಿ ಅವರಷ್ಟು ಸ್ಮಾರ್ಟ್ ಯಾರೂ ಇಲ್ಲ. ನಾವು ಆಲೋಚನೆ ಮಾಡುತ್ತಿರುವುದು ಬರೀ ಮನೆಯ ಒಳಗಿನ ವಿಷಯ. ಜಾಹ್ನವಿ ದಡ್ಡರಲ್ಲ. ವಿಷಯ ಗೊತ್ತಾಯ್ತಾ ನಿಮಗೆ? ಜಾಹ್ನವಿ ಜಾಣರು, ನಾವು ದಡ್ಡರು’ ಎಂದು ಜಾಹ್ನವಿ ಬಗ್ಗೆ ಧ್ರುವಂತ್ ಅವರು ಮಾತು ಶುರು ಮಾಡಿದರು.

‘ಅಶ್ವಿನಿ ಮೇಡಂ ಸಿಕ್ಕಾಪಟ್ಟೆ ರಾಯಲ್ ಬಿಲ್ಡಪ್ ಕೊಟ್ಟಿದ್ದಾರೆ. ನಾನು ಅಂಥ ದೊಡ್ಡ ಹೋರಾಟಗಾರ್ತಿ, ನಾನು ಗೋಲ್ಡನ್ ಸ್ಪೂನ್, ನನಗೆ ಅಪ್ಪ ಸಾಕಷ್ಟು ಮಾಡಿ ಇಟ್ಟಿದ್ದಾರೆ, ನನಗೆ ಕಷ್ಟ ಎಂಬುದೇ ಗೊತ್ತಿಲ್ಲ ಅಂತ ಹೇಳಿಕೊಂಡಿದ್ದಾರೆ. ಅಲ್ಲೇ ಜಾಹ್ನವಿ ಅವರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಬಿಗ್ ಬಾಸ್ ಇನ್ನು ಒಂದು ತಿಂಗಳು ಇರುತ್ತೆ. ತಾನು ಯಾವಾಗ ಬೇಕಾದರೂ ಹೋಗಬಹುದು. ಹೊರಗೆ ಹೋದಮೇಲೆ ಕಷ್ಟ-ಸುಖಕ್ಕೆ ಒಬ್ಬರು ಬಿಗ್ ಬಾಸ್ ಬೇಕಲ್ಲವಾ ತಮಗೆ? ಇಲ್ಲದೇ ಇದ್ದರೆ ನನಗೆ ಗೊತ್ತಿರುವ ಹಾಗೆ ಅವರು ಅಷ್ಟು ದಡ್ಡರಲ್ಲ’ ಎಂದು ಧ್ರುವಂತ್ ಹೇಳಿದ್ದಾರೆ.

ಜಾಹ್ನವಿ ಅವರ ಬಗ್ಗೆ ಧ್ರುವಂತ್ ಅವರು ಈ ರೀತಿ ಮಾತನಾಡಿದ್ದಾರೆ ಎಂಬುದು ಒಂದು ವೇಳೆ ಬಹಿರಂಗ ಆದರೆ ದೊಡ್ಡ ರಂಪಾಟ ಆಗುವ ಸಾಧ್ಯತೆ. ಇದೆ. ಮೊದಲಿನಿಂದಲೂ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕ್ಲೋಸ್ ಆಗಿಯೇ ಇದ್ದರು. ಒಮ್ಮೆ ತಾವೇ ಪ್ಲ್ಯಾನ್ ಮಾಡಿಕೊಂಡು ಜಗಳ ಆಡಿದ್ದರು. ಆ ಡ್ರಾಮಾ ಹೆಚ್ಚು ದಿನ ನಡೆಯಲಿಲ್ಲ. ಈಗ ಮತ್ತೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಒಂದಾಗಿದ್ದಾರೆ. ಅವರಿಬ್ಬರ ಸ್ನೇಹವನ್ನು ಧ್ರುವಂತ್ ಅವರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ.

ಇದನ್ನೂ ಓದಿ: ಸುದೀಪ್ ಇಲ್ಲದಿದ್ದಾಗ ಬಣ್ಣ ಬದಲಿಸುವ ಅಶ್ವಿನಿ ಗೌಡ: ಮುಖವಾಡ ಕಳಚಿದ ಗಿಲ್ಲಿ ನಟ

ಇನ್ನು, ಧ್ರುವಂತ್ ಬಗ್ಗೆ ಅಶ್ವಿನಿ ಗೌಡ ಬಳಿ ಜಾಹ್ನವಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಎಲ್ಲರ ಬಗ್ಗೆ ಧ್ರುವಂತ್ ಗ್ರಹಿಕೆ ಸರಿಯಾಗಿದೆ. ಅವನು ಮಾಸ್ಟರ್ ಮೈಂಡ್. ಬೇರೆಯವರಿಗೆ ಹೋಲಿಸಿದರೆ ಅವನು ಭಿನ್ನವಾಗಿದ್ದಾನೆ. ಬೇರೆಯವರೆಲ್ಲ ಸೇಫ್ ಆಗಿ ಆಡುತ್ತಿದ್ದಾರೆ. ಅವನು ಎಲ್ಲರನ್ನೂ ಎದುರು ಹಾಕಿಕೊಂಡೇ ಆಡುತ್ತಿದ್ದಾನೆ’ ಎಂದು ಜಾಹ್ನವಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.