ಸುದೀಪ್ ಇಲ್ಲದಿದ್ದಾಗ ಬಣ್ಣ ಬದಲಿಸುವ ಅಶ್ವಿನಿ ಗೌಡ: ಮುಖವಾಡ ಕಳಚಿದ ಗಿಲ್ಲಿ ನಟ
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಬಣ್ಣ ಬದಲಾಯಿಸುತ್ತಾರೆ. ಕಿಚ್ಚ ಸುದೀಪ್ ಅವರ ಎದುರಲ್ಲಿ ವಿನಯದಿಂದ ಮಾತನಾಡುವ ಅಶ್ವಿನಿ ಗೌಡ, ವಾರದ ದಿನಗಳಲ್ಲಿ ಬೇರೆ ರೀತಿ ಇರುತ್ತಾರೆ. ವಾರಾಂತ್ಯದಲ್ಲಿ ಕ್ಷಮೆ ಕೇಳುವ ಅವರು ಸೋಮವಾರದಿಂದ ಶುಕ್ರವಾರದ ತನಕ ಮತ್ತೆ ತಪ್ಪು ಮಾಡುತ್ತಾರೆ. ಇದು ಹಲವು ಬಾರಿ ಮರುಕಳಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಬಣ್ಣ ಬದಲಾಯಿಸುತ್ತಾರೆ. ಕಿಚ್ಚ ಸುದೀಪ್ (Kichcha Sudeep) ಅವರ ಎದುರಲ್ಲಿ ವಿನಯದಿಂದ ಮಾತನಾಡುವ ಅಶ್ವಿನಿ ಗೌಡ, ವಾರದ ದಿನಗಳಲ್ಲಿ ಬೇರೆ ರೀತಿ ಇರುತ್ತಾರೆ. ವಾರಾಂತ್ಯದಲ್ಲಿ ಕ್ಷಮೆ ಕೇಳುವ ಅವರು ಸೋಮವಾರದಿಂದ ಶುಕ್ರವಾರದ ತನಕ ಮತ್ತೆ ತಪ್ಪು ಮಾಡುತ್ತಾರೆ. ಇದು ಹಲವು ಬಾರಿ ಮರುಕಳಿಸಿದೆ. ಈ ವಿಷಯವನ್ನು ನವೆಂಬರ್ 23ರ ಸಂಚಿಕೆಯಲ್ಲಿ ಸುದೀಪ್ ಅವರು ಪ್ರಸ್ತಾಪಿಸಿದ್ದಾರೆ. ಅಶ್ವಿನಿ ಗೌಡ ಅವರು ಹೇಗೆಲ್ಲ ಬಣ್ಣ ಬದಲಾಯಿಸುತ್ತಾರೆ ಎಂಬುದನ್ನು ಗಿಲ್ಲಿ ನಟ (Gilli Nata) ಅಭಿನಯಿಸಿ ತೋರಿಸಿದ್ದಾರೆ. ಇತ್ತಿಚಿನ ದಿನಗಳಲ್ಲಿ ಅಶ್ವಿನಿ ಗೌಡ ಅವರು ವುಮನ್ ಕಾರ್ಡ್ ಬಳಸಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಸುದೀಪ್ ಅವರು ಅವಕಾಶ ನೀಡಿಲ್ಲ. ‘ನೀವು ಬೇರೆಯವರಿಂದ ಗೌರವ ನಿರೀಕ್ಷಿಸಿದರೆ ಮೊದಲು ನೀವು ಬೇರೆಯವರಿಗೆ ಗೌರವ ಕೊಡಬೇಕು’ ಎಂಬ ಪಾಠವನ್ನು ಸುದೀಪ್ ಅವರು ಹೇಳಿದ್ದಾರೆ. ಇನ್ನಾದರೂ ಅಶ್ವಿನಿ ಗೌಡ ಬದಲಾಗುತ್ತಾರೋ ಇಲ್ಲವೋ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

