AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಲ್ಲಿ ವಿಮಾನ ನಿಲ್ದಾಣಕ್ಕೆ ಆಗ್ರಹಿಸಿ ಸಿಎಂ, ಕೇಂದ್ರ ಸಚಿವರಿಗೆ ಮಾಜಿ ಸಂಸದರಿಂದ ಪತ್ರ

ತುಮಕೂರಲ್ಲಿ ವಿಮಾನ ನಿಲ್ದಾಣಕ್ಕೆ ಆಗ್ರಹಿಸಿ ಸಿಎಂ, ಕೇಂದ್ರ ಸಚಿವರಿಗೆ ಮಾಜಿ ಸಂಸದರಿಂದ ಪತ್ರ

Jagadisha B
| Edited By: |

Updated on: Nov 23, 2025 | 1:01 PM

Share

ತುಮಕೂರಿಗೆ ಮೆಟ್ರೋ ತರಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರೆ ಜನರಿಗೆ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಸಿಎಂ & ಕೇಂದ್ರ ಸಚಿವರಿಗೆ ಮಾಜಿ ಸಂಸದ ಬಸವರಾಜು ಪತ್ರ ಬರೆದಿದ್ದಾರೆ. ತುಮಕೂರಿನ ವಸಂತನರಸಾಪುರದ ಬಳಿ 3,500 ಎಕರೆ ಜಮೀನು ಲಭ್ಯವಿದೆ. ರಾಷ್ಟ್ರೀಯ ‌ಹೆದ್ದಾರಿ-48 ಸಮೀಪವೇ ಖಾಲಿ ಜಮೀನಿದ್ದು, ತುಮಕೂರು ಬಳಿ ಏರ್​ಪೋರ್ಟ್​ ನಿರ್ಮಾಣದಿಂದ ರಾಜ್ಯದ 21 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.

ತುಮಕೂರು, ನವೆಂಬರ್​​ 23: ತುಮಕೂರಿಗೆ ಮೆಟ್ರೋ ಕಾರ್ಯಯೋಜನೆ ರೂಪುಗೊಂಡ ಬೆನ್ನಲ್ಲೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ವಸಂತ ನರಸಾಪುರ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸಿಎಂ & ಕೇಂದ್ರ ಸಚಿವರಿಗೆ ಮಾಜಿ ಸಂಸದ ಬಸವರಾಜು ಪತ್ರ ಬರೆದಿದ್ದಾರೆ. ಕನಕಪುರ-ನೆಲಮಂಗಲ‌ ಬಳಿ ಏರ್​ಪೋರ್ಟ್​ಗೆ ಅಗತ್ಯ‌ ಭೂಮಿಯಿಲ್ಲ. ಈಗಾಗಲೇ ನೆಲಮಂಗಲ-ಕುಣಿಗಲ್ ರಸ್ತೆಯ ಪ್ರಸ್ತಾವನೆ ಕೈಬಿಡಲಾಗಿದೆ. ಆದರೆ, ತುಮಕೂರಿನ ವಸಂತನರಸಾಪುರದ ಬಳಿ 3,500 ಎಕರೆ ಜಮೀನು ಲಭ್ಯವಿದೆ. ರಾಷ್ಟ್ರೀಯ ‌ಹೆದ್ದಾರಿ-48 ಸಮೀಪವೇ ಖಾಲಿ ಜಮೀನಿದ್ದು, ತುಮಕೂರು ಬಳಿ ಏರ್​ಪೋರ್ಟ್​ ನಿರ್ಮಾಣದಿಂದ  ರಾಜ್ಯದ 21 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ತುಮಕೂರಿಗೆ ಮೆಟ್ರೋ ತರಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ರೆ ಜನರಿಗೆ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಪತ್ರದ ಮೂಲಕ ಬಸವರಾಜು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.