ಚಿಕ್ಕಮಗಳೂರು: ಕಳಪೆ ಗುಣಮಟ್ಟದ ಆಹಾರ ಸೇವಿಸಿ ತರೀಕೆರೆ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿಯರು ಅಸ್ವಸ್ಥ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 2:13 PM

ಮಕ್ಕಳ ಈ ಸ್ಥಿತಿಗೆ ಕಾರಣರಾದವರು ಯಾರು ಅಂತ ತನಿಖೆ ನಡೆದು ಅವರ ವಿರುದ್ಧ ಕ್ರಮ ಜರುಗುವುದು ಕನಸಿನ ಮಾತು. ಕೆಳಗಿನಿಂದ ಮೇಲಿನವರೆಗೆ ಎಲ್ಲರೂ ಭ್ರಷ್ಟಾಚಾರಿಗಳೇ ಆಗಿರುವುದರಿಂದ ಅಂಥದ್ದೇನೂ ನಡೆಯುವುದಿಲ್ಲ.

ಚಿಕ್ಕಮಗಳೂರು: ವಸತಿಶಾಲೆಗಳ ವ್ಯವಸ್ಥಾಪಕರು, ಬೇರೆ ಬೇರೆ ಹಾಸ್ಟೆಲ್ ಗಳ ವಾರ್ಡನ್ ಗಳು ತಮ್ಮ ಜೇಬುಗಳಿಗೆ ದುಡ್ಡು ಇಳಿಸಲು ಚಿಕ್ಕ ಪುಟ್ಟ ಮತ್ತು ಮುಗ್ಧ ಬಾಲಕರ/ಬಾಲಕಿಯರ ಪ್ರಾಣಗಳನ್ನು ಪಣಕ್ಕೊಡ್ಡುತ್ತಾರೆ ಮತ್ತು ಇದು ದಶಕಗಳಿಂದ ನಡೆದುಕೊಂಡು ಬಂದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) 26 ವಿದ್ಯಾರ್ಥಿನಿಯರು (girl students) ಕಳಪೆ ಗುಣಮಟ್ಟದ ಆಹಾರ ಸೇವಿಸಿ ಆಸ್ಪತ್ರೆ ಸೇರಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಕ್ಕಳ ಈ ಸ್ಥಿತಿಗೆ ಕಾರಣರಾದವರು ಯಾರು ಅಂತ ತನಿಖೆ ನಡೆದು ಅವರ ವಿರುದ್ಧ ಕ್ರಮ ಜರುಗುವುದು ಕನಸಿನ ಮಾತು. ಕೆಳಗಿನಿಂದ ಮೇಲಿನವರೆಗೆ ಎಲ್ಲರೂ ಭ್ರಷ್ಟಾಚಾರಿಗಳೇ ಆಗಿರುವುದರಿಂದ ಅಂಥದ್ದೇನೂ ನಡೆಯುವುದಿಲ್ಲ.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

Follow us on