ಕೃಷಿ ಮೇಳದಲ್ಲಿ ಗಮನಸೆಳೆದ ಜಿರಳೆ ಪಕೋಡ, ರೇಷ್ಮೆ ಹುಳು ಸೂಪ್, ಮಿಡತೆಯ ಮಂಚೂರಿಯನ್
ಬೆಂಗಳೂರು ಕೃಷಿ ಮೇಳ 2025ರಲ್ಲಿ ಜಿ.ಕೆ.ವಿ.ಕೆ. ವಿದ್ಯಾರ್ಥಿಗಳು ಸಿದ್ಧಪಡಿಸಿದ ಕೀಟಾಹಾರ ಮೆನು ಎಲ್ಲರ ಗಮನ ಸೆಳೆದಿದೆ. ರೇಷ್ಮೆ ಹುಳು ಸೂಪ್, ಜಿರಳೆ ಪಕೋಡ, ಮಿಡತೆ ಫ್ರೈ ಸೇರಿದಂತೆ ಹಲವು ವಿಶಿಷ್ಟ ಖಾದ್ಯಗಳು ಪ್ರದರ್ಶನಗೊಂಡಿವೆ. ಗರ್ಭಿಣಿಯರಿಗೆ ಇದು ಅತ್ಯಂತ ಪೌಷ್ಟಿಕ ಆಹಾರ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಬೆಂಗಳೂರು, ನವೆಂಬರ್ 16: ಕೃಷಿ ವಿಶ್ವವಿದ್ಯಾಲಯದ ಅಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ ಕಂಡು ಸಾರ್ವಜನಿಕರು ಫಿದಾ ಆಗಿದ್ದಾರೆ. ಚೀನಾ, ಥೈಲ್ಯಾಂಡ್ಗಳಲ್ಲಿ ಕಾಣ ಸಿಗುವಂತ ಹುಳು ಹುಪ್ಪಟೆಗಳ ಆಹಾರ ನೋಡುಗರ ಗಮನ ಸೆಳೆದಿವೆ. ರೇಷ್ಮೆ ಹುಳು ಸೂಪ್, ಜಿರಳೆಯ ಪಕೋಡ, ಗೊಬ್ಬರ ಹುಳುವಿನ ಬರ್ಗರ್ ಆ್ಯಂಡ್ ಸೂಪ್, ಮಿಡತೆಯ ಮಂಚೂರಿಯನ್ ಹೀಗೆ ಹಲವು ಬಗೆಯ ಆಹಾರ ಇಲ್ಲಿ ಕಾಣಸಿಕ್ಕಿದೆ. ಜಿಕೆವಿಕೆ ವಿದ್ಯಾರ್ಥಿಗಳೇ ಅಡುಗೆ ಮಾಡಿ ಇವನ್ನು ತಯಾರಿಸುತ್ತಿದ್ದು, ಗರ್ಭಿಣಿಯರಿಗೆ ಇದು ಅತ್ಯಂತ ಪೌಷ್ಟಿಕ ಆಹಾರ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
