IPL 2024: ಥೇಟ್ ಕೊಹ್ಲಿ ರೀತಿ ಬ್ಯಾಟಿಂಗ್ ಮಾಡಿ ಎಲ್ಲರ ಹುಬ್ಬೇರಿಸಿದ ಮ್ಯಾಕ್ಸ್​ವೆಲ್: ವಿಡಿಯೋ ನೋಡಿ

|

Updated on: Mar 21, 2024 | 11:10 AM

Glenn Maxwell and Virat Kohli: ಐಪಿಎಲ್ 2024 ರ ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಮ್ಮ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭ ಮ್ಯಾಕ್ಸ್‌ವೆಲ್ ನೆಟ್‌ನ ಹಿಂದೆ ಕೊಹ್ಲಿಯ ಹೊಡೆತಗಳನ್ನು ಕಾಪಿ ಮಾಡುತ್ತಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಐಪಿಎಲ್ 2024 ರ ಮೊದಲ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 22, ಶುಕ್ರವಾರ ಚೆಪಾಕ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಬೃಹತ್ ಪಂದ್ಯಕ್ಕೆ ಮುಂಚಿತವಾಗಿ, ಆರ್​ಸಿಬಿ ಭಾರೀ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ದಾಖಲೆ ಬರೆಯಲು ಫಾಫ್ ಪಡೆ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ, ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತರಬೇತಿ ಅವಧಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಅನುಕರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಕೊಹ್ಲಿ ತಮ್ಮ ನೆಟ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಈ ಸಂದರ್ಭ ಮ್ಯಾಕ್ಸ್‌ವೆಲ್ ನೆಟ್‌ನ ಹಿಂದೆ ಕೊಹ್ಲಿಯ ಹೊಡೆತಗಳನ್ನು ಕಾಪಿ ಮಾಡುತ್ತಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್​ಸಿಬಿಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಮ್ಯಾಕ್ಸ್‌ವೆಲ್ ಜೊತೆಗೆ ವಿರಾಟ್‌ನನ್ನು ಅನುಕರಿಸುವಲ್ಲಿ ಸಾಥ್ ನೀಡಿದರು. ಮ್ಯಾಕ್ಸ್‌ವೆಲ್ ಮತ್ತು ಸಿರಾಜ್ ಇಬ್ಬರ ತಮಾಷೆಯ ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 21, 2024 11:08 AM