News9 Global Summit; ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಲವು ಹವಾಮಾನ ವೈಪರೀತ್ಯಗಳನ್ನು ಸೃಷ್ಟಿಸುತ್ತಿದೆ: ಅರ್ ಕೆ ಗೋಯಲ್

|

Updated on: Nov 22, 2024 | 8:21 PM

News9 Global Summit : ತಮ್ಮ ಸಂಸ್ಥೆಯು ಕಳೆದ ಅರ್ಥಿಕ ವರ್ಷದಲ್ಲಿ 141 ಮಿಲಿಯನ್ ಟನ್ ಉಕ್ಕು (ಸ್ಟೀಲ್) ಉತ್ಪಾದನೆ ಮಾಡಿದ್ದು ಅದರೊಟ್ಟಿಗೆ 358 ಮಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್ ಅನ್ನು ಜನರೇಟ್ ಮಾಡಿದೆ. ಸ್ಟೀಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಜಾಗತಿಕವಾಗಿ ಈ ಸೆಕ್ಟರ್ ನಲ್ಲಿ ಶೇಕಡ 7ರಷ್ಟು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತಿದ್ದರೆ ಭಾರತದಲ್ಲಿ ಶೇಕಡ 12ರಷ್ಟು ಉತ್ಪತ್ತಿಯಾಗುತ್ತಿದೆ ಎಂದು ಗೋಯಲ್ ಹೇಳಿದರು.

ಟಿವಿ9 ಕನ್ನಡ ವಾಹಿನಿ ಸಹೋದರ ಸಂಸ್ಥೆಯಾಗಿರುವ ನ್ಯೂಸ್9 ಜರ್ಮನಿಯ ಸ್ಟುಟ್​ಗಾರ್ಟ್ ನಲ್ಲಿ ಅಯೋಜಿಸಿರುವ ವಿಶ್ವಶೃಂಗ ಸಭೆಯಲ್ಲಿ ಮಾತಾಡಿದ ಸಾರ್ಲೋಹ ಅಡ್ವಾನ್ಸ್ಡ್ ಮಟೇರಿಯಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ ಕೆ ಗೋಯಲ್, ರಾಜಕೀಯ, ಉದ್ಯಮ, ಸುಸ್ಥಿರತೆ ಮತ್ತು ಮಾಧ್ಯಮ ಅದ್ಭುತ ಮಿಶ್ರಣ ಉಣಬಡಿಸುತ್ತಿರುವ ಟಿವಿ9 ನೆಟ್ವರ್ಕ್ ಗೆ ಧನ್ಯವಾದಗಳನ್ನು ಸಲ್ಲಿಸಿದರು. ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ಮಾತಾಡಿದ ಗೋಯೆಲ್, 2017ರಲ್ಲಿ ತಾಪಮಾನವು ಔದ್ಯೋಗಿಕ ಮಿತಿಗಿಂತ 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿತ್ತು ಮತ್ತು 2040ರವರೆಗೆ ಅದು 1.5 ಡಿಗ್ರಿ ಸೆಲ್ಸಿಯಸ್​ನಷ್ಟು ಅಧಿಕವಾಗಲಿದೆ ಎಂದು ಹೇಳಿದರು. ಹೆಚ್ಚುತ್ತಿರುವ ತಾಪಮಾನದಿನ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ ಮತ್ತು ಹಿಮನದಿಗಳು ಕರಗುತ್ತಿವೆ ಎಂದು ಹೇಳಿದ ಗೋಯೆಲ್ ಇದನ್ನು ತಡೆಯಲು ಮನುಕುಲ ಏನಾದರೂ ಮಾಡಲೇಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ