ಗೋಕರ್ಣ: ಸಮುದ್ರದಲ್ಲಿ ಮುಳುಗುವ ಆತಂಕ, 8 ವಿಜ್ಞಾನಿಗಳಿದ್ದ ಸಂಶೋಧನಾ ಹಡಗು ರಕ್ಷಣೆ,  ರೋಚಕ ಕಾರ್ಯಾಚರಣೆಯ ವಿಡಿಯೋ ನೋಡಿ

ಗೋಕರ್ಣ: ಸಮುದ್ರದಲ್ಲಿ ಮುಳುಗುವ ಆತಂಕ, 8 ವಿಜ್ಞಾನಿಗಳಿದ್ದ ಸಂಶೋಧನಾ ಹಡಗು ರಕ್ಷಣೆ,  ರೋಚಕ ಕಾರ್ಯಾಚರಣೆಯ ವಿಡಿಯೋ ನೋಡಿ

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಸಾಧು ಶ್ರೀನಾಥ್​

Updated on: Jul 29, 2023 | 2:53 PM

ಕಾರವಾರ: ಮುಳುಗುವ ಹಂತದಲ್ಲಿದ್ದ ಹಡಗಿನಲ್ಲಿದ್ದವರ ರಕ್ಷಣೆ ರೋಚಕ ಕಾರ್ಯಾಚರಣೆಯ ವಿಡಿಯೋ ನೋಡಿ

ಕಾರವಾರ (ಉತ್ತರ ಕ‌ನ್ನಡ): 8 ವಿಜ್ಞಾನಿಗಳನ್ನು ಹೊಂದಿದ್ದ ಸಂಶೋಧನಾ ಹಡಗನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಾಫಿಗೆ ಸೇರಿದ ಆರ್.ವಿ.ಸಿಂಧು ಸಾಧನಾ ಎಂಬ ಸಂಶೋಧನಾ ಹಡಗಿನ ರಕ್ಷಣೆ ಮಾಡಲಾಗಿದೆ. ಹಡಗಿನ ಎಂಜಿನ್ ಕೆಟ್ಟು ಗೋಕರ್ಣದಿಂದ ಸುಮಾರು 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮುಳುಗುವ ಆತಂಕದಲ್ಲಿತ್ತು. 8 ವಿಜ್ಞಾನಿಗಳು ಹಾಗೂ‌ ಹಡಗಿನ ಸಿಬ್ಬಂದಿ ಸೇರಿ ಒಟ್ಟು 36 ಜನರು ಈ ಹಡಗಿನಲ್ಲಿದ್ದರು.

ಸಂಶೋಧನಾ ಕಾರ್ಯದ ಭಾಗವಾಗಿ ಗೋವಾದಿಂದ ಕೊಚ್ಚಿಯತ್ತ ವಿಜ್ಞಾನಿಗಳು ಹಡಗಿನಲ್ಲಿ ಸಾಗುತ್ತಿದ್ದರು. ಸಮುದ್ರದಲ್ಲಿ ಬೃಹತ್ ಅಲೆಗಳು ಹಾಗೂ ವಿಪರೀತ ಗಾಳಿಯಿಂದಾಗಿ ಮಂಗಳೂರು, ಕಾರವಾರ ಬಂದರಿನ ಟಗ್ ನೆರವಿಗೆ ಧಾವಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಗೋವಾದಿಂದ ಶಿಪ್‌ನೊಂದಿಗೆ ಕಾರ್ಯಾಚರಣೆಗೆ ಇಳಿದ ಇಂಡಿಯನ್ ಕೋಸ್ಟ್ ಗಾರ್ಡ್ ನೆರವಿಗೆ ಧಾವಿಸಿತು. ಬುಧವಾರ ರಾತ್ರಿಯೇ ಹಡಗನ್ನು ರವಾನೆ ಮಾಡಿ ಸಂಶೋಧನಾ ಹಡಗನ್ನು ದುರಸ್ಥಿ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಮತ್ತೆರಡು ಬೋಟ್‌ಗಳನ್ನು ಕೂಡಾ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು. ವಿಜ್ಞಾನಿಗಳಿದ್ದ ಹಡಗಿನ ದುರಸ್ಥಿ ಸಾಧ್ಯವಾಗದ ಕಾರಣ ಕೋಸ್ಟ್ ಗಾರ್ಡ್ ಹಡಗು ಗೋವಾದತ್ತ ಎಳೆದೊಯ್ಯಲಾಗಿದೆ. ವಿಜ್ಞಾನಿಗಳ ತಂಡ ಹಡಗಿನಲ್ಲಿ ಗೋವಾದತ್ತ ಹಿಂತಿರುಗಿದ್ದಾರೆ.