ಗೋಕರ್ಣ ದೇಗುಲದಲ್ಲಿ ಡಿಕೆ ಶಿವಕುಮಾರ್ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟು ಆಶಿರ್ವದಿಸಿದ ಮಹಾಗಣಪತಿ
ಗೋಕರ್ಣದ ಮಹಾಗಣಪತಿ ಮತ್ತು ಆಂಡ್ಲೇ ಗ್ರಾಮದ ಜಗದೀಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶುಭ ಸೂಚನೆ ದೊರೆತಿದೆ. ಗೋಕರ್ಣದ ಮಹಾಗಣಪತಿ ಡಿಕೆ ಶಿವಕುಮಾರ್ಗೆ ಬಲಗಡೆಯಿಂದ ಹೂ ನೀಡಿದ್ದು, ಭಕ್ತರು ಮತ್ತು ಸ್ಥಳೀಯರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ವಿಡಿಯೋ ಇಲ್ಲಿದೆ.
ಕಾರವಾರ, ಡಿಸೆಂಬರ್ 20: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇಗುಲಕ್ಕೆ ಭೇಟಿ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಪೂಜೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಗೋಕರ್ಣದ ಮಹಾಗಣಪತಿ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಪರ ಶುಭ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದ ವೇಳೆ, ಮಹಾಗಣಪತಿಗೆ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥನೆ ಸಲ್ಲಿಸಲಾಗಿತ್ತು. ಪೂಜೆ ವೇಳೆ ಮಹಾಗಣಪತಿ ಬಲಗಡೆಯಿಂದ ಹೂ ನೀಡಿದ್ದು, ಇದು ಭವಿಷ್ಯದ ಉತ್ತಮ ಬೆಳವಣಿಗೆಯ ಸಂಕೇತ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಆಂಡ್ಲೇ ಗ್ರಾಮದಲ್ಲಿರುವ ಪ್ರಸಿದ್ಧ ಶಕ್ತಿ ದೇವತೆ ಜಗದೀಶ್ವರಿ ದೇವಸ್ಥಾನದಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಗದೀಶ್ವರಿ ದೇವಿಗೆ ಐದು ಬಾರಿ ಬೇಡಿಕೆ ಇಟ್ಟಾಗಲೂ ಪ್ರತಿಬಾರಿಯೂ ಒಳ್ಳೆಯ ಮುನ್ಸೂಚನೆ ದೊರೆತಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.