ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್

ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್

ಮದನ್​ ಕುಮಾರ್​
|

Updated on: Nov 08, 2024 | 3:32 PM

ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಟಾಸ್ಕ್​ ವೇಳೆ ಅವರು ನಡೆದುಕೊಂಡ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಹಾಗಾಗಿ ಅವರು ಜೈಲು ಸೇರಿದ್ದಾರೆ. ಅಲ್ಲದೇ ಈ ವಾರ ಅವರು ನಾಮಿನೇಟ್​ ಕೂಡ ಆಗಿರುವುದರಿಂದ ಡಬಲ್ ಶಾಕ್ ಎದುರಾಗಿದೆ.

ಈ ವಾರ ನಾಮಿನೇಟ್ ಆಗಿರುವ 7 ಮಂದಿ ಪೈಕಿ ಗೋಲ್ಡ್ ಸುರೇಶ್ ಕೂಡ ಇದ್ದಾರೆ. ಅದರ ಜೊತೆಗೆ ಅವರಿಗೆ ಕಳಪೆ ಪಟ್ಟವೂ ಸಿಕ್ಕಿದೆ. ಹಲವು ಕಾರಣಗಳನ್ನು ನೀಡಿ ಗೋಲ್ಡ್ ಸುರೇಶ್ ಅವರಿಗೆ ಕಳಪೆ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ತಮ್ಮ ಕಡೆಗೆ ಎಲ್ಲರೂ ಬೆರಳು ತೋರಿಸಿದ್ದು ನೋಡಿ ಗೋಲ್ಡ್ ಸುರೇಶ್ ಅವರಿಗೆ ಶಾಕ್ ಆಗಿದೆ. ವೀಕ್ಷಕರ ವೋಟ್​ನಿಂದ ಮಾತ್ರ ಅವರು ಈ ವಾರ ಸೇವ್ ಆಗಲು ಸಾಧ್ಯ. ವಾರಾಂತ್ಯ ಸಮೀಪಿಸಿದೆ. ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.