ಬಿಗ್ ಬಾಸ್ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೇಗೆ ಆಯ್ಕೆ ಆದರು ಎಂಬ ಬಗ್ಗೆ ಕೆಲವರಿಗೆ ಅನುಮಾನ ಇದೆ. ಅವರೇ ದುಡ್ಡು ಕೊಟ್ಟು ಬಿಗ್ ಬಾಸ್ಗೆ ಹೋದರು ಎಂಬ ಗಾಸಿಪ್ ಕೂಡ ಹಬ್ಬಿದೆ. ಫಿನಾಲೆಗೆ ಹತ್ತಿರದಲ್ಲೇ ಇರುವಾಗ ಏಕಾಏಕಿ ಗೋಲ್ಡ್ ಸುರೇಶ್ ಔಟ್ ಆಗಿದ್ದರಿಂದ ಜನರಿಗೆ ಅನುಮಾನ ಹೆಚ್ಚಾಯಿತು. ಅದಕ್ಕೆಲ್ಲ ಸ್ವತಃ ಸುರೇಶ್ ಈಗ ಉತ್ತರ ನೀಡಿದ್ದಾರೆ.
ದುಡ್ಡು ಕೊಟ್ಟು ಬಿಗ್ ಬಾಸ್ ಶೋಗೆ ಆಯ್ಕೆ ಆಗಲು ಸಾಧ್ಯವಿಲ್ಲ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ. ‘ಅವರೇ ನನಗೆ ದುಡ್ಡು ಕೊಟ್ಟು ಕಳಿಸಿದ್ದಾರೆ. ಅದಕ್ಕೆ ನಾನು ಅಭಾರಿ ಆಗಿರುತ್ತೇನೆ. ಕೋಟಿ ದುಡ್ಡು ಇದ್ದರೆ ಬಿಗ್ ಬಾಸ್ ಮನೆಯ ಒಳಗೆ ಹೋಗಬಹುದು ಎಂಬುದೆಲ್ಲ ಸುಳ್ಳು. ಅದಕ್ಕೆ ದೊಡ್ಡ ಪ್ರಕ್ರಿಯೇ ಇದೆ. ಸುಮಾರು 6ರಿಂದ 7 ಮೀಟಿಂಗ್ ಮಾಡುತ್ತಾರೆ. ಬೇರೆ ಬೇರೆ ವ್ಯಕ್ತಿಗಳು ಮೀಟಿಂಗ್ ಮಾಡುತ್ತಾರೆ. ಕೊನೆಗೆ ಡೈರೆಕ್ಟರ್ ಮೀಟಿಂಗ್ ಮಾಡುತ್ತಾರೆ. ಅದನ್ನೆಲ್ಲ ದಾಟಿಕೊಂಡು ಹೋಗುವುದು ಅಷ್ಟು ಸುಲಭ ಅಲ್ಲ’ ಎಂದಿದ್ದಾರೆ ಗೋಲ್ಡ್ ಸುರೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.