ಶ್ರೀಕಾಕುಳಂ ಸಮುದ್ರ ತೀರಕ್ಕೆ ತೇಲಿ ಬಂದ ಹೊನ್ನಿನ ಬಣ್ಣದ ರಥದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 12, 2022 | 6:20 PM

ರಥದ ಕಂಬಿಗಳ ಮೇಲೆ 16-1-2022 ಅಂತ ನಮೂದಿಸಲಾಗಿದೆ. ಅದೇನು ದಿನಾಂಕವೋ ಅಥವಾ ಬೇರೆ ಏನ್ನನ್ನಾದರೂ ಸೂಚಿಸುತ್ತದೆಯೋ? ಜನೆವರಿ 16 ರಂದು ಯಾವುದೇ ವಿಶೇಷ ಘಟನೆ ಬಗ್ಗೆ ನಡೆದಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಈ ರಥವನ್ನು 16-1-2022 ರಂದು ನಿರ್ಮಿಸಿರುವ ಸಾಧ್ಯತೆಯೂ ಇದೆ.

ಶ್ರೀಕಾಕುಳಂ: ಆಂಧ್ರಪ್ರದೇಶ ಶ್ರೀಕಾಕುಳಂ (Srikakulam) ಜಿಲ್ಲೆಯ ಸುನ್ನಿಪಲ್ಲಿ ಹೆಸರಿನ ಗ್ರಾಮಕ್ಕೆ ಅಂಟಿಕೊಂಡಿರುವ ಕರಾವಳಿ ತೀರಕ್ಕೆ ಹೊನ್ನಿನ ಬಣ್ಣದ ರಥವೊಂದು (golden chariot) ತೇಲಿ ಬಂದ ಸಂಗತಿಯನ್ನು ನಾವು ಬುಧವಾರ ಚರ್ಚಿಸಿದ್ದೇವೆ. ಶ್ರೀಕಾಕುಳಂ ಕಲೆಕ್ಟರ್ ರಥದ ಚಿನ್ನದ ಬಣ್ಣದ್ದಾಗಿದೆಯೇ ಹೊರತು ಚಿನ್ನದಿಂದ ತಯಾರಿಸಲ್ಪಟ್ಟಿದ್ದು ಅಲ್ಲ ಅಂತ ಸ್ಪಷ್ಟ ಪಡಿಸಿದ್ದರು ಮತ್ತು ಸದರಿ ರಥವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಹೇಳಿದ್ದರು. ಆದರೆ ಸಮುದ್ರದಲ್ಲಿ ತೇಲಿ ಕೌತುಕಮಯ ರಥ ಗುರುವಾರವೂ ಸಹ ಸಮುದ್ರದ ದಡದಲ್ಲಿತ್ತು. ರಥದ ಬಗ್ಗೆ ಸ್ಥಳೀಯರ ಕುತೂಹಲ ಮಾತ್ರ ಜಾಸ್ತಿಯಾಗಿದೆ. ವಿಡಿಯೋನನಲ್ಲಿ ಕಾಣುತ್ತಿರುವ ಹಾಗೆ ಜನ ರಥವನ್ನು ಸುತ್ತುವರಿದಿದ್ದಾರೆ, ಅದನ್ನು ಹತ್ತಿ ಮತ್ತು ಮುಟ್ಟಿ ನೋಡುತ್ತಿದ್ದಾರೆ.

ರಥವನ್ನು ಗಮನಿಸಿ ಮಾರಾಯ್ರೇ. ನಾವು ನಿನ್ನೆ ಚರ್ಚಿಸಿದ ಹಾಗೆ ಅದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್ ದೇಶಗಳ ಕಡೆಯಿಂದ ಶ್ರೀಕಾಕುಳಂ ಕಡೆ ತೇಲಿ ಬಂದಿರಬಹುದು. ಖಾಲಿ ಬ್ಯಾರೆಲ್ ಗಳಿಗೆ ರಥವನ್ನು ಅಲುಗಾಡದಂತೆ ಕಟ್ಟಿ ಸಮುದ್ರದಲ್ಲಿ ತೇಲಿ ಬಿಡಲಾಗಿದೆ. ಅದನ್ನು ಇಷ್ಟೆಲ್ಲಾ ವ್ಯವಸ್ಥಿತವಾಗಿ ಸಮುದ್ರಕ್ಕಿಳಿಸಿ ಬೇರೆಡೆ ಕಳಿಸುವ ಜರೂರತ್ತಾದರೂ ಏನಿತ್ತು ಅನ್ನೋದು ಜನರನ್ನು ಕಾಡುತ್ತಿರುವ ಅಂಶವಾಗಿದೆ.

ಮತ್ತೊಂದು ಉಲ್ಲೇಖನೀಯ ಅಂಶವೆಂದರೆ, ರಥದ ಕಂಬಿಗಳ ಮೇಲೆ 16-1-2022 ಅಂತ ನಮೂದಿಸಲಾಗಿದೆ. ಅದೇನು ದಿನಾಂಕವೋ ಅಥವಾ ಬೇರೆ ಏನ್ನನ್ನಾದರೂ ಸೂಚಿಸುತ್ತದೆಯೋ? ಜನೆವರಿ 16 ರಂದು ಯಾವುದೇ ವಿಶೇಷ ಘಟನೆ ಬಗ್ಗೆ ನಡೆದಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಈ ರಥವನ್ನು 16-1-2022 ರಂದು ನಿರ್ಮಿಸಿರುವ ಸಾಧ್ಯತೆಯೂ ಇದೆ.

ಅದೇನೇ ಇರಲಿ, ಹೊನ್ನಿನ ಬಣ್ಣದ ರಥದ ಬಗ್ಗೆ ಜನರಲ್ಲಿ ಪ್ರಶ್ನೆ ಮತ್ತು ಗೊಂದಲಗಳು ಎದ್ದಿರುವುದಂತೂ ಸತ್ಯ.

ಇದನ್ನೂ ಓದಿ:   ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ತೇಲಿಬಂದ ಹೊನ್ನಿನ ಬಣ್ಣದ ರಥವನ್ನು ಪೊಲೀಸರು ವಶಕ್ಕೆ ಪಡೆದರು!