Yogaraj Bhat: ‘ಹೆಂಡ್ತಿ ಪ್ಯಾಂಟ್ ಹಾಕ್ಕೊಂಡು ಬರ್ತಾರೆ ಯೋಗರಾಜ್ ಭಟ್’; ವೇದಿಕೆ ಮೇಲೆ ಗಣೇಶ್ ವಿವರಿಸಿದ ಫನ್ನಿ ಘಟನೆ
Gaalipata 2 Success Meet: ಅದ್ದೂರಿಯಾಗಿ ‘ಗಾಳಿಪಟ 2’ ಚಿತ್ರದ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಯೋಗರಾಜ್ ಭಟ್ ಬಗ್ಗೆ ಗಣೇಶ್ ಮಾತನಾಡಿದ್ದಾರೆ.
ನಟ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಮತ್ತು ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ನಡುವಿನ ಗೆಳತನ ಹಲವು ವರ್ಷಗಳದ್ದು. ಚಿತ್ರರಂಗದಲ್ಲಿ ಇಬ್ಬರೂ ಜೊತೆಜೊತೆಯಲ್ಲಿ ಸಾಗಿ ಬಂದಿದ್ದಾರೆ. ‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರದಲ್ಲಿ ಯಶಸ್ಸು ಕಂಡಿದ್ದ ಅವರು ‘ಗಾಳಿಪಟ 2’ (Gaalipata 2) ಚಿತ್ರದ ಮೂಲಕವೂ ಗೆದ್ದು ಬೀಗಿದ್ದಾರೆ. ಸಕ್ಸಸ್ ಮೀಟ್ ವೇದಿಕೆಯಲ್ಲಿ ಗಣೇಶ್ ಕಾಮಿಡಿ ಕಿಕ್ ನೀಡಿದ್ದಾರೆ. ‘ಯೋಗರಾಜ್ ಭಟ್ ಒಂದು ಕಾಲಿಗೆ ಶೂ, ಇನ್ನೊಂದು ಕಾಲಿಗೆ ಚಪ್ಪಲಿ ಹಾಕ್ಕೊಂಡು ಬರ್ತಾರೆ. ಒಮ್ಮೆ ಅವರ ಪತ್ನಿಯ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದಿದ್ದರು. ನೋಡಿ ನಂಗೆ ಶಾಕ್ ಆಯ್ತು. ದಯವಿಟ್ಟು ಲಂಗ, ಚೂಡಿದಾರ್ ಹಾಕ್ಕೊಂಡು ಬರಬೇಡಿ ಸರ್’ ಎಂದು ಕಾಲೆಳೆದರು ಗಣೇಶ್.
Published on: Aug 18, 2022 01:21 PM