ತರುಣ್ ಸುಧೀರ್ ಮದುವೆ ಬಗ್ಗೆ ಮಾತನಾಡಿದ ಗಣೇಶ್
ಹೊಸ ರಿಯಾಲಿಟಿ ಶೋ ‘ಗೋಲ್ಡನ್ ಗ್ಯಾಂಗ್’ ಆರಂಭ ಆಗುತ್ತಿದೆ. ಇದರ ನಿರೂಪಣೆಯ ಜವಾಬ್ದಾರಿಯನ್ನು ಗಣೇಶ್ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ‘ಟಿವಿ9 ಕನ್ನಡ’ ಜೊತೆ ಗಣೇಶ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಅವರು ಸ್ಯಾಂಡಲ್ವುಡ್ನಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಹೊಂದಿದ್ದಾರೆ. ಅವರು ಮದುವೆ ವಿಚಾರಕ್ಕೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ತರುಣ್ ಈಗಲೂ ಬ್ಯಾಚುಲರ್. ದೊಡ್ಡ ಯಶಸ್ಸು ಸಿಕ್ಕ ಹೊರತಾಗಿಯೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಹೀಗಾಗಿ, ಅವರು ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ನಟ ಗಣೇಶ್ ಹಾಗೂ ತರುಣ್ ಗೆಳೆಯರು. ಹೀಗಾಗಿ ತರುಣ್ ಮದುವೆ ಬಗ್ಗೆ ಗಣೇಶ್ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ನಟ ಗಣೇಶ್ ಅವರು ಜೀ ಕನ್ನಡ ವಾಹಿನಿ ಜೊತೆ ಕೈ ಜೋಡಿಸಿದ್ದಾರೆ. ಹೊಸ ರಿಯಾಲಿಟಿ ಶೋ ‘ಗೋಲ್ಡನ್ ಗ್ಯಾಂಗ್’ ಆರಂಭ ಆಗುತ್ತಿದೆ. ಇದರ ನಿರೂಪಣೆಯ ಜವಾಬ್ದಾರಿಯನ್ನು ಗಣೇಶ್ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ‘ಟಿವಿ9 ಕನ್ನಡ’ ಜೊತೆ ಗಣೇಶ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್
Published on: Jan 08, 2022 06:57 PM