Karnataka Bandh: ಕರ್ನಾಟಕ ಬಂದ್ ಗೆ ಉತ್ತಮ ಬೆಂಬಲ, ಬಿಎಂಟಿಸಿ ಬಸ್ ನಿಲ್ದಾಣದಿಂದ ಕದಲದ ವಾಹನಗಳು, ಜನರ ಪರದಾಟ

|

Updated on: Sep 29, 2023 | 10:24 AM

ವರದಿಗಾರರು ಹೇಳುವ ಪ್ರಕಾರ ನಿರ್ದಿಷ್ಟ ಸ್ಥಳದ ಕಡೆ ಹೋಗುವ ಜನರನ್ನು ಅಧಿಕಾರಿಗಳು ಒಂದುಗೂಡಿಸಿ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಬಂದ್ ಬಗ್ಗೆ ಗೊತ್ತಿರದ ಇಬ್ಬರು ಯುವತಿಯರು ಬಂದು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಅವರಿಗೆ ಕೋರಮಂಗಲ ಕಡೆ ಹೋಗಬೇಕಂತೆ. ಅವರನ್ನು ಅಧಿಕಾರಿಗಳು ಹೇಗೆ ತಲುಪಿಸುತ್ತಾರೋ?

ಬೆಂಗಳೂರು: ಕಾವೇರಿ ಜಲ ವಿವಾದದ (Cauvery water issue) ಹಿನ್ನೆಲೆ ವಿವಿಧ ಕನ್ನಡ ಪರ ಸಂಘಟನೆಗಳು ನೀಡಿರುವ ಅಖಂಡ ಕರ್ನಾಟಕ ಬಂದ್ (Karnataka Bandh) ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ. ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಬಿಎಮ್ ಟಿಸಿ ಬಸ್ ನಿಲ್ದಾಣದಲ್ಲಿನ (BMTC bus terminal) ಪ್ರತ್ಯಕ್ಷ ಚಿತ್ರಣವನ್ನು ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿದ್ದಾರೆ. ಬಸ್ ಸಂಚಾರ ಎಂದಿನಂತಿರುತ್ತದೆ ಅಂತ ನಿನ್ನೆ ಸರ್ಕಾರದ ಪ್ರತಿನಿಧಿಗಳು ಹೇಳಿದ್ದರೂ ವಾಸ್ತವಾಂಶ ಭಿನ್ನವಾಗಿದೆ. ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಗಳ ಜೊತೆ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಬಸ್ ಗಳು ನಿಲ್ದಾಣದಿಂದ ಕದಲುತ್ತಿಲ್ಲ. ಅಲ್ಲೊಂದಿಲ್ಲೊಂದು ಬಸ್ ಅನ್ನು ಕಳಿಸುವ ವ್ಯವಸ್ಥೆ ನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ವರದಿಗಾರರು ಹೇಳುವ ಪ್ರಕಾರ ನಿರ್ದಿಷ್ಟ ಸ್ಥಳದ ಕಡೆ ಹೋಗುವ ಜನರನ್ನು ಅಧಿಕಾರಿಗಳು ಒಂದುಗೂಡಿಸಿ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಬಂದ್ ಬಗ್ಗೆ ಗೊತ್ತಿರದ ಇಬ್ಬರು ಯುವತಿಯರು ಬಂದು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಅವರಿಗೆ ಕೋರಮಂಗಲ ಕಡೆ ಹೋಗಬೇಕಂತೆ. ಅವರನ್ನು ಅಧಿಕಾರಿಗಳು ಹೇಗೆ ತಲುಪಿಸುತ್ತಾರೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on