ಚಾಮರಾನಗರ: ರೈತರ ಆಕ್ರೋಶಕ್ಕೆ ತಮಿಳಿನ ಚಂದ್ರಮುಖಿ 2 ಚಿತ್ರದ ಪೋಸ್ಟರ್ ಚಿಂದಿ ಚಿತ್ರಾನ್ನ
ಇವತ್ತು ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ವಿವಿಧ ಸಂಘಟನೆಗಳು ಸಿದ್ದರಾಮಯ್ಯ ಹಾಗೂ ತಮಿಳುನಾಡು ಸಿಎಂ ಪ್ರಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ. ಇದರ ಮಧ್ಯೆ ಚಾಮರಾನಗರದಲ್ಲಿ ರೈತರು ತಮಿಳಿನ ಚಂದ್ರಮುಖಿ-2 ಸಿನಿಮಾದ ಪೋಸ್ಟರ್ ಹರಿದು ಆಕ್ರೋಶ ಹೊರ ಹಾಕಿದ್ದಾರೆ.
ಚಾಮರಾನಗರ, (ಸೆಪ್ಟೆಂಬರ್ 29): ಕಾವೇರಿಗಾಗಿ ಕರುನಾಡು ಕೂಗುತ್ತಿದೆ. ಜೀವಜಲಕ್ಕಾಗಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಒಂದು ಹನಿ ನೀರನ್ನ ಬಿಡ್ಬಬಾರದು ಎಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನಮ್ಮದು ಎನ್ನುವ ಧ್ವನಿ ಮಾರ್ಧನಿಸಿದೆ. ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಿ, ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುಗಡೆ ಮಾಡಬಾರದು ಎನ್ನುವ ಆಗ್ರಹ ಜೋರಾಗಿದೆ. ಹೀಗಾಗಿ ಇವತ್ತು ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ವಿವಿಧ ಸಂಘಟನೆಗಳು ಸಿದ್ದರಾಮಯ್ಯ ಹಾಗೂ ತಮಿಳುನಾಡು ಸಿಎಂ ಪ್ರಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ. ಇದರ ಮಧ್ಯೆ ಚಾಮರಾನಗರದಲ್ಲಿ ರೈತರು ತಮಿಳಿನ ಚಂದ್ರಮುಖಿ-2 ಸಿನಿಮಾದ ಪೋಸ್ಟರ್ ಹರಿದು ಆಕ್ರೋಶ ಹೊರ ಹಾಕಿದ್ದಾರೆ.
ಇಂದು(ಸೆಪ್ಟೆಂಬರ್ 29) ಬೆಳಗ್ಗೆ ಚಾಮರಾಜನಗರದ ಸಿದ್ದಾರ್ಥ ಚಿತ್ರಮಂದಿರ ಆವರಣಕ್ಕೆ ನುಗ್ಗಿದ ರೈತರು, ಲ್ಯಾರೆನ್ಸ್ ರಾಘವ ನಟಿಸಿ ನಿರ್ದೇಶಿಸಿರುವ ತಮಿಳು ಚಿತ್ರ ಚಂದ್ರಮುಖಿ 2 ಪೋಸ್ಟರ್ ಹರಿದು ಹಾಕಿದರು. ಇನ್ನು ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದಾದರೂ ಅಷ್ಟೊತ್ತಿಗಾಗಲೇ ಪೋಸ್ಟರ್ ಅನ್ನು ಹರಿದು ಚಿತ್ರಾನ್ನ ಮಾಡಿದ್ದರು.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ