ನೋಡ ನೋಡುತ್ತಿದ್ದಂತೆ ಲಾರಿಗೆ ಗುದ್ದೇ ಬಿಡ್ತು ರೈಲು! ವೈರಲ್ ವಿಡಿಯೋ ಇಲ್ಲಿದೆ
ಲಾರಿಗೆ ರೈಲು ಗುದ್ದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಈ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ಧೇಶ್ವರ ರೈಲ್ವೆ ಕ್ರಾಷಿಂಗ್ ಬಳಿ ನೋಡ ನೋಡುತ್ತಿದ್ದಂತೆ ವೇಗವಾಗಿ ಬಂದ ರೈಲು (Train) ಲಾರಿಗೆ (Lorry) ಗುದ್ದಿದೆ. ರೈಲು ಗುದ್ದಿದ ಪರಿಣಾಮ ಲಾರಿಯ ಹಿಂಭಾಗ ನಜ್ಜು ಗುಜ್ಜಾಗಿದೆ. ರೈಲು ಬರುತ್ತಿದೆ ಎಂದು ಗೇಟ್ ಮ್ಯಾನ್ ರೈಲ್ವೆ ಗೇಟ್ ಹಾಕಿದ್ದಾರೆ. ಅಷ್ಟರಲ್ಲಿ ಲಾರಿ ಗೇಟ್ ನೊಳಗೆ ಹೋಗಿದೆ. ಗೇಟ್ ತೆಗೆಯಬೇಕು ಅನ್ನುವಷ್ಟರಲ್ಲಿ ವೇಗವಾಗಿ ಬಂದ ರೈಲು ಲಾರಿಯನ್ನ ಗುದ್ದಿಕೊಂಡು ಮುಂದೆ ಹೋಗಿದ್ದು, ಲಾರಿಗೆ ರೈಲು ಗುದ್ದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಈ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: WI vs BAN: ಹೀನಾಯ ಸೋಲಿನ ಬೆನ್ನಲ್ಲೇ ಬಾಂಗ್ಲಾ ತಂಡಕ್ಕೆ ಶೇ.20 ರಷ್ಟು ದಂಡ..!
Published on: Jul 07, 2022 12:15 PM