ಪ್ರಯಾಣಿಕರ ಗಮನಕ್ಕೆ! ನೈಋತ್ಯ ರೈಲ್ವೆಯ ನಿರ್ವಹಣೆ ಕಾರಣ ಬೆಂಗಳೂರು-ಮೈಸೂರು ರೈಲುಗಳ ಸಂಚಾರ ಭಾಗಶಃ ರದ್ದು
ನೈಋತ್ಯ ರೈಲ್ವೆಯು ನಿರ್ವಹಣೆ ಕಾರಣಗಳಿಂದಾಗಿ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ ಅಥವಾ ಭಾಗಶಃ ಸ್ಥಗಿತಗೊಳಿಸಲಾಗಿದೆ
ಬೆಂಗಳೂರು: ನೈಋತ್ಯ ರೈಲ್ವೆಯ (Southwest Railway) ಎಸ್ ಮತ್ತು ಟಿ ಗೆ ಸಂಬಂಧಿಸಿದ ನಾನ್ಇಂಟರ್‌ಲಾಕಿಂಗ್ ಕೆಲಸಗಳು, ಬಿಡದಿ (Bidadi) ಮತ್ತು ರಾಮನಗರ (Ramnagar) ನಿಲ್ದಾಣಗಳ ಕಾರ್ಯಗಳು ಆರಂಭವಾಗಲಿವೆ. ಜುಲೈ 5, 6 ಮತ್ತು 7 ರಂದು ಲೆವೆಲ್ ಕ್ರಾಸಿಂಗ್ ನಂ. 34 – 35 ರ ಇಂಟರ್‌ಲಾಕಿಂಗ್ ಮತ್ತು ಬಿಡದಿ-ರಾಮನಗರ ನಡುವೆ 120 ಮೀಟರ್ ಲೈನ್ ಬ್ಲಾಕ್ ಕಾರ್ಯ ನಡೆಯುವುದರಿಂದ ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ.
ಸಂಚಾರ ರದ್ದಾದ ರೈಲುಗಳು:
1. ರೈಲು ಸಂಖ್ಯೆ 06526 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಜುಲೈ 5 ಮತ್ತು 7 ರಂದು ರದ್ದುಗೊಳ್ಳಲಿದೆ 2. ರೈಲು ಸಂಖ್ಯೆ 06559 ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ಜುಲೈ 6 ಮತ್ತು 7 ರಂದು ರದ್ದಗೊಳ್ಳಲಿದೆ
ಭಾಗಶಃ ಸಂಚಾರ ರದ್ದಾದ ರೈಲುಗಳು:
1. ದಿನಾಂಕ ಜುಲೈ 5 ಮತ್ತು 7 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06255 ಕೆಎಸ್ಆರ್ ಬೆಂಗಳೂರು – ಮೈಸೂರು ಮೆಮು ಪ್ರಯಾಣವನ್ನು ಕೆಂಗೇರಿ – ಮೈಸೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು ರೈಲು ಸಂಚಾರವು ಕೆಂಗೇರಿಯಲ್ಲಿ ಕೊನೆಗೊಳ್ಳುತ್ತದೆ.
2. ದಿನಾಂಕ ಜುಲೈ 5 ಮತ್ತು 7 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 06560 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಮೈಸೂರು-ಕೆಂಗೇರಿ ನಡುವೆ ಭಾಗಶಃ ರದ್ದಾಗಲಿದೆ ಮತ್ತು ನಿಗದಿತ ನಿರ್ಗಮನದ ಸಮಯದಲ್ಲಿ ಕೆಂಗೇರಿಯಿಂದ ಹೊರಟು ಕೆಎಸ್‌ಆರ್ ಬೆಂಗಳೂರನ್ನು ತಲುಪುತ್ತದೆ.
5 ಮತ್ತು 7 ರಂದು ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ನಡುವೆ ಮಾತ್ರ ಸಂಚರಿಸುತ್ತದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.
Published On - 6:59 pm, Sat, 2 July 22