ಹುಬ್ಬಳ್ಳಿಯಲ್ಲಿ ಅಗ್ನಿ ಅವಗಢ, ಹೋಟೆಲ್ ಮತ್ತು ಎಟಿಎಮ್ ಕಿಯಾಸ್ಕ್ ಗೆ ಬೆಂಕಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 2:56 PM

ಹೋಟೆಲ್ ಅಂಟಿಕೊಂಡೇ ಇದ್ದ ಎಟಿಎಮ್ ಕಿಯಾಸ್ಕ್ ಕೂಡ ಸುಟ್ಟು ಭಸ್ಮವಾಗಿದೆ. ಹೋಟೆಲ್ ನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುತ್ತಿದ್ದ ಸಾಮಾನುಗಳು ಸುಟ್ಟು ಬೂದಿಯಾಗಿಬಿಟ್ಟಿವೆ.

ಹುಬ್ಬಳ್ಳಿ:  ನಿನ್ನೆ ತಡರಾತ್ರಿ ನಡೆದಿರುವ ಬೆಂಕಿ ಆಕಸ್ಮಿಕ ಘಟನೆಯಿದು. ಹುಬ್ಬಳ್ಳಿಯ ಜೆಸಿ ನಗರದಲ್ಲಿ ಶ್ರೀಕಾಂತ್ ಗೋಕಾಕ್ (Srikanth Gokak) ಎನ್ನುವವರಿಗೆ ಸೇರಿದ ಹೋಟೆಲೊಂದಕ್ಕೆ ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ (Short Circuit) ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಜ್ವಾಲೆಗಳು ಹೋಟೆಲ್ ಸುತ್ತಮುತ್ತ ಹಬ್ಬಿಬಿಟ್ಟಿವೆ. ಹೋಟೆಲ್ ಅಂಟಿಕೊಂಡೇ ಇದ್ದ ಎಟಿಎಮ್ ಕಿಯಾಸ್ಕ್ (ATM Kiosk) ಕೂಡ ಸುಟ್ಟು ಭಸ್ಮವಾಗಿದೆ. ಹೋಟೆಲ್ ನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುತ್ತಿದ್ದ ಸಾಮಾನುಗಳು ಸುಟ್ಟು ಬೂದಿಯಾಗಿಬಿಟ್ಟಿವೆ. ಎಟಿಎಮ್ ನಲ್ಲಿ ಎಷ್ಟು ಹಣವಿತ್ತು ಗೊತ್ತಾಗಿಲ್ಲ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಹೊತ್ತಿಗೆ ಬಹಳಷ್ಟು ಹಾನಿ ಸಂಭವಿಸಿತ್ತು.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ