ವೀರ ಸಾವರ್ಕರ್ ಅವರನ್ನು ಅವಮಾನಿಸಿದ ಗೂಂಡಾಗಳನ್ನು ಸುಮ್ಮನೆ ಬಿಡಬಾರದು: ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 11:02 AM

ಸಾರ್ವರ್ಕರ್ ಅವರನ್ನು ಅವಮಾನಿಸಿದ ಗೂಂಡಾಗಳನ್ನು ಸುಮ್ಮನೆ ಬಿಡಬಾರದು ಎಂದು ಪ್ರಮೋದ್ ಮುತಾಲಿಕ್ ಗುಡುಗಿದರು.

ಕಾರವಾರ: ಶ್ರೀರಾಮ ಸೇನೆ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಕಾರವಾರದ ಶಿರಸಿಯಲ್ಲಿ (Sirsi) ನಡೆದ ಭಾರತ ಸಂಕಲ್ಪ ದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುವಾಗ ಸ್ವಾತಂತ್ರ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ (Veer Savarkar) ಅವರ ಭಾವಚಿತ್ರ ಪ್ರದರ್ಶಿಸಿದ್ದಕ್ಕೆ ಅಕ್ಷೇಪಣೆ ಎತ್ತಿದ ಪಿಎಫ್ ಐ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರ ವಿರುದ್ಧ ಬೆಂಕಿಯುಗುಳಿದರು. ಸಾರ್ವರ್ಕರ್ ಅವರನ್ನು ಅವಮಾನಿಸಿದ ಗೂಂಡಾಗಳನ್ನುಸುಮ್ಮನೆ ಬಿಡಬಾರದು ಎಂದು ಅವರು ಗುಡುಗಿದರು.