ಶೀತಪ್ರದೇಶದಿಂದ ಮೈಸೂರು ಮೃಗಾಲಯಕ್ಕೆ ಬಂದಿರುವ ಗೊರಿಲ್ಲಾಗಳು ಹೊಸ ಪರಿಸರವನ್ನು ಎಂಜಾಯ್ ಮಾಡುತ್ತಿವೆ!
ಅಸಲಿಗೆ ಈ ಗೊರಿಲ್ಲಾಗಳು ನಮ್ಮ ದೇಶದಲ್ಲಿ ಹುಟ್ಟಿದವುಗಳಲ್ಲ. ಅವೆರಡನ್ನು ಜರ್ಮನಿಯ ಆಲ್ವೆಟ್ಟರ್ ಜೂ ನಿಂದ ಮೈಸೂರಿಗೆ ತರಲಾಗಿದೆ. ಗೊರಿಲ್ಲಾಗಳ ಹೆಸರು ತಾಬೊ ಮತ್ತು ಡೆಂಬ. ಕಡಿಮೆ ತಾಪಮಾನದ ಜರ್ಮನಿಯಲ್ಲಿದ್ದ ತಾಬೊ ಮತ್ತು ಡೆಂಬ ಮೈಸೂರಿನ ಅಧಿಕ ತಾಪಮಾನಕ್ಕೆ ಹೊಂದಿಕೊಂಡಿವೆ.
ಮಂಗನಿಂದ ಮಾನವ ಅಂತ ಹೇಳುತ್ತದೆ ಡಾರ್ವಿನ್ ವಿಕಾಸವಾದ ಸಿದ್ಧಾಂತ (Darwin’s Theory of Evolution). ಅದು ಸತ್ಯ ಅಂತ ಬಹಳಷ್ಟು ಜನರು ಒಪ್ಪಿಕೊಂಡಿದ್ದಾರೆ ಕೆಲವರು ಅಲ್ಲಗಳೆಯುತ್ತಾರೆ. ಚಿಂಪಾಂಜಿ (Chimpanzee) ಮತ್ತು ಗೊರಿಲ್ಲಾಗಳನ್ನು (gorilla) ನೋಡುತ್ತಿದ್ದರೆ ಡಾರ್ವಿನ್ ಹೇಳಿದ್ದು ಸರಿ ಅನಿಸುತ್ತದೆ. ಡಾರ್ವಿನ್ ಸಿದ್ಧಾಂತದ ಬಗ್ಗೆ ನಾವು ಚರ್ಚಿಸುವುದು ಬೇಡ ಮಾರಾಯ್ರೇ. ಆಫ್ ಕೋರ್ಸ್ ನಮ್ಮ ಚರ್ಚೆಯ ಗೊರಿಲ್ಲಾ ನಿಜವಾದರೂ ಅದಕ್ಕೆ ಡಾರ್ವಿನ್ ವಿಕಾಸವಾದ ತಳುಕು ಹಾಕಿ ಗೊಂದಲ ಮಾಡಿಕೊಳ್ಳುವುದು ಬೇಡ. ಅಸಲಿಗೆ ನಮಗೊಂದು ವಿಡಿಯೋ ಸಿಕ್ಕಿದೆ. ಮೈಸೂರಿನಲ್ಲಿರುವ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ (Mysuru Chamarajendra Wodeyar Zoo) ಭೇಟಿ ನೀಡಿದ್ದ ಸದ್ಗೃಹಸ್ತರೊಬ್ಬರು ವಿಡಿಯೋವನ್ನು ಶೂಟ್ ಮಾಡಿದ್ದಾರೆ. ಎರಡು ಗೊರಿಲ್ಲಾಗಳ ನಡುವಿನ ಕಾದಾಟವನ್ನು (ಅದು ಕಾದಾಟವೋ ಅಥವಾ ಮೋಜಿನ ಸೆಣಸಾಟವೋ (friendly banter) ಅಂತ ನೀವೇ ನಿರ್ಧರಿಸಿ) ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಅಸಲಿಗೆ ಈ ಗೊರಿಲ್ಲಾಗಳು ನಮ್ಮ ದೇಶದಲ್ಲಿ ಹುಟ್ಟಿದವುಗಳಲ್ಲ. ಅವೆರಡನ್ನು ಜರ್ಮನಿಯ ಆಲ್ವೆಟ್ಟರ್ ಜೂ ನಿಂದ ಮೈಸೂರಿಗೆ ತರಲಾಗಿದೆ. ಗೊರಿಲ್ಲಾಗಳ ಹೆಸರು ತಾಬೊ ಮತ್ತು ಡೆಂಬ. ಕಡಿಮೆ ತಾಪಮಾನದ ಜರ್ಮನಿಯಲ್ಲಿದ್ದ ತಾಬೊ ಮತ್ತು ಡೆಂಬ ಮೈಸೂರಿನ ಅಧಿಕ ತಾಪಮಾನಕ್ಕೆ ಹೊಂದಿಕೊಂಡಿವೆ.
ಗೊರಿಲ್ಲಾಗಳ ಮೂಲ ವಾಸಸ್ಥಳ ಕಾಡು, ತಾವು ಅರಣ್ಯಪ್ರದೇಶದಲ್ಲೇ ವಾಸವಾಗಿದ್ದೇವೆ ಎಂಬ ಭಾವನೆ ಮೂಡಲು ಅಂಥದ್ದೇ ಪರಿಸರ ಮೃಗಾಲಯದಲ್ಲಿ ನಿರ್ಮಾಣಗೊಂಡಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ.
ಗೊರಿಲ್ಲಾಗಳ ಕಾದಾಟ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆಲ್ಲ ಮುದ ನೀಡಿದೆ. ಆದರೆ ಜನ ತಮ್ಮನ್ನು ಗಮನಿಸುತ್ತಿದ್ದಾರೆಂಬ ಪರಿವೆ ಅವುಗಳಿಗಿಲ್ಲ. ತಮ್ಮ ಕಾದಾಟವನ್ನು ತಮ್ಮದೇ ಆದ ರೀತಿಯಲ್ಲಿ ಎಂಜಾಯ್ ಮಾಡುತ್ತಿವೆ. ಥ್ಯಾಂಕ್ಸ್ ಫಾರ್ ದಿ ಎಂಟರ್ಟೇನ್ ಮೆಂಟ್ ಮೇಟ್ಸ್!
ಇದನ್ನೂ ಓದಿ: ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 65 ಪುಷ್ ಅಪ್ಸ್ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್; ಇಲ್ಲಿದೆ ವಿಡಿಯೋ