AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷನ ಕೊಲೆಗೆ ಕೆಲವೇ ನಿಮಿಷ ಮೊದಲು ಇಬ್ಬರು ಯುವತಿಯರು ಪದೇಪದೆ ವಿಡಿಯೋ ಕಾಲ್ ಮಾಡಿದ್ದರಂತೆ!

ಹರ್ಷನ ಕೊಲೆಗೆ ಕೆಲವೇ ನಿಮಿಷ ಮೊದಲು ಇಬ್ಬರು ಯುವತಿಯರು ಪದೇಪದೆ ವಿಡಿಯೋ ಕಾಲ್ ಮಾಡಿದ್ದರಂತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 23, 2022 | 7:35 PM

Share

ಅದಾದ ಮೇಲೆ ಅವರು ಅಲ್ಲಿಂದ (ಅಮ್ಮ ಕ್ಯಾಂಟೀನ್) ಹೊರಡಲು ಅಣಿಯಾಗುತ್ತಾರೆ. ಆಗ ಹರ್ಷ ಯಾಕೋ ಸರಿಯೆನಿಸುತ್ತಿಲ್ಲ, ಬೈಕ್ಗಳಲ್ಲಿ ಹೋಗೋಣ ಅಂದಿದಕ್ಕೆ ಮೂವರು ಸ್ನೇಹಿತರು ಅವುಗಳನ್ನು ತೆಗೆದುಕೊಂಡು ಬರಲು ಕಾಮತ್ ಪೆಟ್ರೋಲ್ ಬಂಕ್ ಕಡೆ ಹೋದರಂತೆ

ಹರ್ಷನ ಕೊಲೆ ಪ್ರಕರಣಕ್ಕೆ ಒಂದು ಆಸಕ್ತಿಕರ ತಿರುವು (interesting twist) ಸಿಕ್ಕಿದೆ. ಹರ್ಷ (Harsha) ಅವರ ಕೊಲೆಯಾಗುವ ಕೆಲವೇ ನಿಮಿಷಗಳ ಮೊದಲು ಅವರೊಂದಿಗಿದ್ದ ಮೂವರು ಸ್ನೇಹಿತರ ಪೈಕಿ ಒಬ್ಬರು ಟಿವಿ9 ಜೊತೆ ಮಾತಾಡಿ ಕೊಲೆಗೆ ಮುಂಚೆ ಏನು ನಡೆಯಿತು ಅನ್ನೋದನ್ನು ಹೇಳಿದ್ದಾರೆ. ಈ ನಾಲ್ವರು ಅಂದರೆ, ಅಂದರೆ ಹರ್ಷ ಮತ್ತು ಅವರ ಮೂವರು ಗೆಳೆಯರು (friends) ಮಾತಾಡುತ್ತಿದ್ದಾಗ ಅವರಿಗೆ ಅಪರಿಚಿತ ಯುವತಿಯರಿಂದ ಪದೇಪದೆ ಕರೆಗಳು ಬಂದವಂತೆ. ನೀವು ಯಾರು ಅಂತ ಗೊತ್ತಿಲ್ಲ ಅಂತ ಹರ್ಷ ಹೇಳಿದರೂ ಪೋನ್ ಮಾಡುವುದನ್ನು ಮುಂದುವರಿಸಿ ಕೊನೆಗೆ ವಿಡಿಯೋ ಕಾಲ್ ಮಾಡಲಾರಂಭಿಸಿದ್ದಾರೆ. ಆಗಲೂ ಹರ್ಷ ಅದೇ ಮಾತನ್ನು ಹೇಳಿದ್ದಾರೆ. ಹರ್ಷ ಆ ಯುವತಿಯರನ್ನು ಸ್ನೇಹಿತರಿಗೂ ತೋರಿಸಿದ್ದಾರೆ. ಅವರಲ್ಲಿ ಸಹ ಯಾರೊಬ್ಬರೂ ಕಾಲ್ ಮಾಡುತ್ತಿದ್ದ ಯುವತಿಯರನ್ನು ಮೊದಲು ಯಾವತ್ತೂ ನೋಡಿರಲಿಲ್ಲವಂತೆ.

ಅದಾದ ಮೇಲೆ ಅವರು ಅಲ್ಲಿಂದ (ಅಮ್ಮ ಕ್ಯಾಂಟೀನ್) ಹೊರಡಲು ಅಣಿಯಾಗುತ್ತಾರೆ. ಆಗ ಹರ್ಷ ಯಾಕೋ ಸರಿಯೆನಿಸುತ್ತಿಲ್ಲ, ಬೈಕ್ಗಳಲ್ಲಿ ಹೋಗೋಣ ಅಂದಿದಕ್ಕೆ ಮೂವರು ಸ್ನೇಹಿತರು ಅವುಗಳನ್ನು ತೆಗೆದುಕೊಂಡು ಬರಲು ಕಾಮತ್ ಪೆಟ್ರೋಲ್ ಬಂಕ್ ಕಡೆ ಹೋದರಂತೆ. ಸ್ವಲ್ಪ ಹೊತ್ತಿನ ಬಳಿಕ ಅವರಿಗೆ ಒಂದು ಫೋನ್ ಕಾಲ್ ಬಂದಿದೆ.

ಅವರು ಗಾಬರಿಯಿಂದ ವಾಪಸ್ಸು ಹೋಗುವಷ್ಟರಲ್ಲಿ ಕಾಶಿಫ್ ಎನ್ನುವ ಆರೋಪಿ ಕೈಯಲ್ಲಿ ಬ್ಯಾಟ್ ಹಿಡಿದು ಓಡುತ್ತಿರುವುದು ಕಂಡಿತು ಎಂದು ಸ್ನೇಹಿತ ಹೇಳುತ್ತಾರೆ. ಅರೋಪಿಗಳು ಮತ್ತು ಹರ್ಷನ ನಡುವಡ ವೈಷಮ್ಯ ಇದ್ದ ವಿಷಯ ಅವರಿಗೆ ಗೊತ್ತಿರಲಿಲ್ಲವಂತೆ. ಹಿಂದೊಮ್ಮೆ ಜಗಳವಾಗಿದ್ದ ವಿಷಯವನ್ನು ಮಾತ್ರ ಹರ್ಷ ಈ ಸ್ನೇಹಿತರಿಗೆ ಹೇಳಿದ್ದರಂತೆ.

ತನಿಖೆಗೆ ಅಡ್ಡಿಯಾಗಿರುವ ವಿಷಯವೆಂದರೆ, ಹರ್ಷನ ಫೋನ್ ನಾಪತ್ತೆಯಾಗಿರುವುದು.

ಇದನ್ನೂ ಓದಿ:  ಹರ್ಷನ ಕೊಲೆ ವಿರುದ್ಧ ಹಿಂದೂ-ಪರ ಸಂಘಟನೆ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಿಳಿದ ಬಿಜೆಪಿ ಶಾಸಕನಿಗೆ ಮುಖಭಂಗ