ಸರ್ಕಾರೀ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಇಲ್ಲ: ಶಿವಕುಮಾರ್
ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕರಿಯ ಅಂತ ಕರೆದಿದ್ದು ಅವರ ನಡುವಿನ ವೈಯಕ್ತಿಕ ವಿಚಾರ, ಜೆಡಿಎಸ್ ಟ್ವೀಟ್ ಗಳನ್ನು ತಾನು ಗಮನಿಸುತ್ತಿದ್ದೇನೆ, ಕೇವಲ ಪಕ್ಷದ ಮುಖಂಡರು ಯಾಕೆ ರಿಯಾಕ್ಟ್ ಮಾಡುತ್ತಿದ್ದಾರೆ, ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ಸಲ್ಲಿಸುತ್ತಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರು: ಸರ್ಕಾರೀ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನಿಗದಿಪಡಿಸುವ ನಿರ್ಧಾರ ಮಾಡಿಲ್ಲ ಅಂಥ ಪ್ರಸ್ತಾವನೆಯ ಸರ್ಕಾರದ ಮುಂದಿಲ್ಲ, ಇದೆಲ್ಲ ಬಿಜೆಪಿಯ ಸೃಷ್ಟಿ, ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಅಂತ ಖಾತರಿಯಾಗಿದೆ, ಹಾಗಾಗಿ ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಹಿಂದೆ ಪರಿಶಿಷ್ಟ ಜಾತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸುವ ಯೋಚನೆ ಸರ್ಕಾರಕ್ಕಿತ್ತು, ಈಗ ಅದ್ಯಾವುದೂ ಇಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಯತ್ನ ಜೆಡಿಎಸ್ ಮತ್ತು ಬಿಜೆಪಿ ಮಾಡುತ್ತಿವೆ: ಶಿವಕುಮಾರ್