ನೂರು ಕೇಸ್ ಬಿದ್ದರೂ ಹಿಂದೂಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ: ಹರೀಶ್ ಪೂಂಜ, ಶಾಸಕ

Updated on: May 05, 2025 | 7:14 PM

ನನ್ನನ್ನು ಸೀರಿಯಲ್ ಅಫೆಂಡರ್ ಎಂದು ಕರೆಯುವ ದಿನೇಶ್ ಗುಂಡೂರಾವ್, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ 35-40 ಟ್ಯೂಬ್​​ಲೈಟ್​​ಗಳನ್ನು ಒಡೆದ ಮುಸಲ್ಮಾನರ ವಿರುದ್ಧ ಯಾಕೆ ಮೊಕದ್ದಮೆ ದಾಖಲಿಸಲಿಲ್ಲ, ಇವರ ಹಿಂದೂತ್ವ ನಮಗೆ ಬೇಕಿಲ್ಲ, ಇಂಥ ಉಸ್ತುವಾರಿ ಸಚಿವ ಸಿಕ್ಕಿದ್ದು ನಮ್ಮ ದುರ್ದೈವ ಎಂದು ಪೂಂಜ ಹೇಳಿದರು. ಹಿಂದೂಗಳ ರಕ್ಷಣೆ ಅವರಿಂದೇನೂ ಆಗಬೇಕಿಲ್ಲ ಎಂದು ಶಾಸಕ ಹೇಳಿದರು.

ಮಂಗಳೂರು, ಮೇ 5: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಮೇಲೆ ನನ್ನ ವಿರುದ್ಧ 8-9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಆದರೆ ಇವುಗಳ ಪೈಕಿ ಒಂದು ಪ್ರಕರಣದಲ್ಲೂ ನನ್ನ ಸ್ವಂತದ ಕೆಲಸಕ್ಕಾಗಿ ಕೇಸ್ ಬಿದ್ದಿಲ್ಲ, ಪ್ರತಿವಾರಿ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಮತ್ತು ಹಿಂದೂ ಸಮಾಜದ ಹಿತಕ್ಕಾಗಿ ಹೋರಾಡಿದಾಗ ನನ್ನ ವಿರುದ್ಧ ಎಫ್​ಐಅರ್ ದಾಖಲಾಗಿದೆ, 100 ಕೇಸು ಬಿದ್ದರೂ ಹಿಂದೂಗಳಿಗಾಗಿ ಹೋರಾಡುವುದನ್ನು ನಿಲ್ಲಿಸಲ್ಲ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಹೇಳಿದರು. ನಾನು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವವನು, ಅದಕ್ಕಾಗಿ ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ, ಕೆಲಸ ಮುಂದುವರಿಯುತ್ತದೆ ಎಂದು ಪೂಂಜ ಹೇಳಿದರು.

ಇದನ್ನೂ ಓದಿ: ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ