ಕೆಂಪೇಗೌಡರ ಪ್ರಗತಿಯ ಪ್ರತಿಮೆ ನೋಡಲು ಬಂದವರಿಗೆ ನಿರಾಸೆ; ಸರ್ಕಾರದ ವಿರುದ್ಧ ಪ್ರವಾಸಿಗರ ಆಕ್ರೋಶ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಎತ್ತರವಾದ 108 ಅಡಿಯ ನಾಡಪ್ರಭು ಕೆಂಪೆಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು (ನ. 11) ರಂದು ಉದ್ಘಾಟಿಸಿದರು.
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಎತ್ತರವಾದ 108 ಅಡಿಯ ನಾಡಪ್ರಭು ಕೆಂಪೆಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು (ನ. 11) ರಂದು ಉದ್ಘಾಟಿಸಿದರು. ಇಂದು (ನ.13) ವೀಕೆಂಡ್ವಾದ ಕಾರಣ “ಪ್ರಗತಿಯ ಪ್ರತಿಮೆ”ಯನ್ನು ನೋಡಲು ಬಂದ ಪ್ರವಾಸಿಗರಿಗೆ ನಿರಾಸೆ ಕಾದಿತ್ತು. ಕೆಂಪೇಗೌಡರ ಪ್ರತಿಮೆ ನೋಡಲು ಹೋದ ಪ್ರವಾಸಿಗರಿಗೆ ನಿರ್ಬಂಧದ ಬಿಸಿ ತಟ್ಟಿದೆ. ಈ ಸಂಬಂಧ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಮೆ ನೋಡಲು ಬಿಡುತ್ತಿಲ್ಲ. ಗೇಟ್ ಹಾಕೋದಾದರೇ ಉದ್ಘಾಟನೆ ಮಾಡಿದ್ದು ಯಾಕೆ. ನೂರಾರು ಕಿಲೋ ಮೀಟರ್ ದೂರದಿಂದ ಬಂದಿದ್ದೀವಿ. ವೀಕೆಂಡ್ ಅಂತ ಬಂದರೇ ನೋಡಲು ಆಗುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Latest Videos