Kamblihula: ‘ಜಾತಿ ವ್ಯವಸ್ಥೆ ತೆಗೆದು ಹಾಕ್ತೀನಿ’: ಮಹತ್ವಾಕಾಂಕ್ಷೆ ತಿಳಿಸಿದ ‘ಕಂಬ್ಳಿಹುಳ’ ಚಿತ್ರದ ಹೀರೋ
Kamblihula Kannada Movie: ಟಿವಿ9 ವಿಶೇಷ ಸಂದರ್ಶನದಲ್ಲಿ ‘ಕಂಬ್ಳಿಹುಳ’ ಚಿತ್ರತಂಡದವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಶ್ವಿತಾ ಹೆಗಡೆ ಮತ್ತು ಅಂಜನ್ ಇಂಟರೆಸ್ಟಿಂಗ್ ಉತ್ತರಗಳನ್ನು ನೀಡಿದ್ದಾರೆ.
ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿದ ‘ಕಂಬ್ಳಿಹುಳ’ ಸಿನಿಮಾ (Kamblihula Movie) ಜನಮನ ಗೆದ್ದಿದೆ. ಈ ಚಿತ್ರಕ್ಕೆ ನವನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಅಂಜನ್ ಮತ್ತು ಅಶ್ವಿತಾ ಹೆಗಡೆ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಟಿವಿ9 ನಡೆಸಿದ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ರ‍್ಯಾಪಿಡ್ ಫೈರ್ ರೌಂಡ್ ವೇಳೆ ಅಶ್ವಿತಾ ಮತ್ತು ಅಂಜನ್ (Kamblihula hero Anjan) ಇಂಟರೆಸ್ಟಿಂಗ್ ಉತ್ತರಗಳನ್ನು ನೀಡಿದ್ದಾರೆ. ಒಂದು ದಿನ ನೀವು ಪ್ರಧಾನ ಮಂತ್ರಿಯಾದರೆ ಏನು ಮಾಡ್ತೀರಿ ಎಂದು ಕೇಳಿದ್ದಕ್ಕೆ ‘ಜಾತಿ ವ್ಯವಸ್ಥೆ (Caste System) ತೆಗೆದು ಹಾಕ್ತೀನಿ’ ಎಂದು ಹೇಳಿದ್ದಾರೆ ಅಂಜನ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos

