ವಿರೋಧ ಪಕ್ಷದ ನಾಯಕನಾಗಿರುವ ನನ್ನನ್ನೇ ಸರ್ಕಾರ ಹೆದರಿಸಿ ಸವಾಲು ಹಾಕುತ್ತಿದೆ: ಸಿದ್ದರಾಮಯ್ಯ
ಸರ್ಕಾರದ ಭ್ರಷ್ಟಾಚಾರ, ಶಾಸಕರ ಲಂಚಗುಳಿತನ, ಪೊಲೀಸರ ನಿಷ್ಕ್ರಿಯತೆ ಮೊದಲಾದವುಗಳನ್ನು ವಿರೋಧಿಸಿ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ, ಅದಕ್ಕೆ ಪ್ರತಿಯಾಗಿ ಒಂದ ಜಾಗೃತಿ ಸಮಾವೇಶ ಮಾಡುವುದಾಗಿ ಸರ್ಕಾರ ತಮ್ಮನ್ನು ಹೆದರಿಸುತ್ತಿದೆ ಅಂತ ಹೇಳಿದರು.
ಬೆಂಗಳೂರು: ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಕರೆಸಿಕೊಳ್ಳುವ ವಿರೋಧ ಪಕ್ಷದ ನಾಯಕನಾಗಿರುವ ತಮನ್ನು ಸರ್ಕಾರ ಹೆದರಿಸಲು ಪ್ರಯತ್ನಿಸುತ್ತಿದೆ, ತಮಗೆ ಸವಾಲು ಹಾಕುತ್ತಿದೆ ಎಂದು ಸಿದ್ದರಾಮಯ್ಯ ಬೆಂಗಳೂರಲ್ಲಿ ಮಂಗಳವಾರ ಹೇಳಿದರು. ಹಿಂದೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದಾಗಲೇ ತಾವು ಬಳ್ಳಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದು ಎಂದ ಅವರು ಸರ್ಕಾರದ ಭ್ರಷ್ಟಾಚಾರ, ಶಾಸಕರ ಲಂಚಗುಳಿತನ, ಪೊಲೀಸರ ನಿಷ್ಕ್ರಿಯತೆ ಮೊದಲಾದವುಗಳನ್ನು ವಿರೋಧಿಸಿ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ, ಅದಕ್ಕೆ ಪ್ರತಿಯಾಗಿ ಒಂದ ಜಾಗೃತಿ ಸಮಾವೇಶ ಮಾಡುವುದಾಗಿ ಸರ್ಕಾರ ತಮ್ಮನ್ನು ಹೆದರಿಸುತ್ತಿದೆ ಅಂತ ಹೇಳಿದರು.