ಸಿದ್ದರಾಮಯ್ಯ ಅಧಿಕೃತ ನಿವಾಸಕ್ಕೆ ಹೆಚ್ಚುವರಿ ಭದ್ರತೆಯಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ

ಸಿದ್ದರಾಮಯ್ಯ ಅಧಿಕೃತ ನಿವಾಸಕ್ಕೆ ಹೆಚ್ಚುವರಿ ಭದ್ರತೆಯಾಗಿ ಮೆಟಲ್ ಡಿಟೆಕ್ಟರ್ ಅಳವಡಿಕೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 1:10 PM

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಅವರನ್ನು ಭೇಟಿಯಾಗಲು ಸಾಕಷ್ಟು ಜನ ಬರುತ್ತಾರೆ. ಹಾಗಾಗಿ, ದುಷ್ಕರ್ಮಿಗಳು ಜನ ಸಾಮಾನ್ಯರ ಹಾಗೆ ಅವರ ಮನೆನುಗ್ಗಿ ಆಕ್ರಮಣ ನಡೆಸುವ ಸಾಧ್ಯತೆ ಇಲ್ಲವಾಗಿಸಲು ಮೆಟಲ್ ಡಿಟೆಕ್ಟರನ್ನು ಮೇನ್ ಗೇಟ್ ಹತ್ತಿರ ಅಳಡಿಸಲಾಗುತ್ತಿದೆ.

ಬೆಂಗಳೂರು:  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಜೀವ ಬೆದರಿಕೆ ಕರೆಗಳಿ ಹೆಚ್ಚಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅವರ ಅಧಿಕೃತ ನಿವಾಸಕ್ಕೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಮೆಟಲ್ ಡಿಟೆಕ್ಟರನ್ನು (Metal Detector) ಅಳವಡಿಸಲಾಗುತ್ತಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿರುವುದರಿಂದ ಅವರನ್ನು ಭೇಟಿಯಾಗಲು ಸಾಕಷ್ಟು ಜನ ಬರುತ್ತಾರೆ. ಹಾಗಾಗಿ, ದುಷ್ಕರ್ಮಿಗಳು ಜನ ಸಾಮಾನ್ಯರ ಹಾಗೆ ಅವರ ಮನೆನುಗ್ಗಿ ಆಕ್ರಮಣ ನಡೆಸುವ ಸಾಧ್ಯತೆ ಇಲ್ಲವಾಗಿಸಲು ಮೆಟಲ್ ಡಿಟೆಕ್ಟರನ್ನು ಮೇನ್ ಗೇಟ್ ಹತ್ತಿರ ಅಳಡಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಆದೇಶವೊಂದನ್ನು ಹೊರಡಿಸಿದ್ದರು.