ಪ್ರಸ್ತಾಪಿತ ‘ಕೊಡಗು ಚಲೋ’ ಕಾರ್ಯಕ್ರಮವನ್ನು ಮುಂದೂಡಿದ ಸಿದ್ದರಾಮಯ್ಯ ಇದು ಪಕ್ಷದ ತೀರ್ಮಾನ ಎಂದರು!

ಪ್ರಸ್ತಾಪಿತ ‘ಕೊಡಗು ಚಲೋ’ ಕಾರ್ಯಕ್ರಮವನ್ನು ಮುಂದೂಡಿದ ಸಿದ್ದರಾಮಯ್ಯ ಇದು ಪಕ್ಷದ ತೀರ್ಮಾನ ಎಂದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 3:03 PM

ಒಬ್ಬ ವಿರೋಧ ಪಕ್ಷದ ನಾಯಕನಾಗಿ ಅದನ್ನು ಉಲ್ಲಂಘಿಸುವ ಬದಲು ಮಾಜಿ ಮುಖ್ಯಮಂತ್ರಿಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತೇನೆ ಎಂದು ಹೇಳಿದ ಅವರು, ಇದು ಪಕ್ಷದ ತೀರ್ಮಾನವಾಗಿದೆ ಎಂದರು.

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಗಸ್ಟ್ 26 ರಂದು ಹಮ್ಮಿಕೊಂಡಿದ್ದ ‘ಕೊಡಗು ಚಲೋ’ (Kodagu Chalo) ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ (Siddaramaiah) ಘೋಷಣೆ ಮಾಡಿದ್ದಾರೆ. ಕೊಡಗಿನಲ್ಲಿ 4 ದಿನಗಳವರೆಗೆ ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಒಬ್ಬ ವಿರೋಧ ಪಕ್ಷದ ನಾಯಕನಾಗಿ ಅದನ್ನು ಉಲ್ಲಂಘಿಸುವ ಬದಲು ಮಾಜಿ ಮುಖ್ಯಮಂತ್ರಿಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತೇನೆ ಎಂದು ಹೇಳಿದ ಅವರು, ಇದು ಪಕ್ಷದ ತೀರ್ಮಾನವಾಗಿದೆ ಎಂದರು.