ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಸರ್ಕಾರ, ಹೋರಾಟಕ್ಕೆ ಜಯ, ಚನ್ನರಾಯಪಟ್ಟಣ ಸುತ್ತಮುತ್ತಲಿನ ರೈತರು ನಿರಾಳ

Updated on: Jul 15, 2025 | 2:24 PM

ಸರ್ಕಾರ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳಲ್ಲ, ಆದರೆ ರೈತರೇ ಸ್ವಯಂಪ್ರೇರಿತರಾಗಿ ತಮ್ಮ ಜಮೀನು ಮಾರಲು ಮುಂದಾದರೆ ಸರ್ಕಾರ ಅದಕ್ಕೆ ಸೂಕ್ತ ಬೆಲೆಯನ್ನು ನೀಡುವುದು ಮತ್ತು ಕೆಐಎಡಿಬಿ ಅಭಿವೃದ್ಧಿಪಡಿಸಿದ ಬಳಿಕ ಅದರಲ್ಲಿ ಶೇಕಡ 50ರಷ್ಟು ಭಾಗವನ್ನು ಅವರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, ಜುಲೈ 15: ರೈತರು, ಪ್ರಗತಿಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಮತ್ತು ಬೇರೆ ಕೆಲ ಸಂಘಸಂಸ್ಥೆಗಳು ನಡೆಸಿದ ಮತ್ತು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಹೇಳುವಂತೆ ಐತಿಹಾಸಿಕ ಮತ್ತು ವಿಶಿಷ್ಟ ಹೋರಾಟಕ್ಕೆ ಜಯ ಸಂದಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತ 1,777 ಎಕರೆ ಜಮೀನನ್ನು ಸ್ವಾಧೀನ ಮಾಡಿಕೊಂಡು ಕೆಐಎಡಿಬಿ ಮೂಲಕ ಅಭಿವೃದ್ಧಿ ಮಾಡುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ರೈತರು ಜಮೀನು ನೀಡಲು ಒಪ್ಪುತ್ತಿಲ್ಲ ಮತ್ತು ಅನೇಕ ಸಂಘಸಂಸ್ಥೆಗಳು ಅವರ ಪರವಾಗಿ ಹೋರಾಟ ಮಾಡುತ್ತಿರುವುದರಿಂದ ಸ್ವಾಧೀನ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ಸಿದ್ದರಾಮಯ್ಯ ರೈತರ ಸಮ್ಮುಖದಲ್ಲಿ ಪ್ರಕಟಿಸಿದಾಗ ಅವರ ಮಾತನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಲಾಯಿತು.

ಇದನ್ನೂ ಓದಿ:  ಸಿಗಂದೂರು ಸೇತುವೆ ಉದ್ಘಾಟನೆ; ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ