ಬಿಮ್ಸ್​ನಲ್ಲಿ ಬಾಣಂತಿಯರ ಸಾವು; ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಅಕ್ಷಮ್ಯ: ಬಿವೈ ವಿಜಯೇಂದ್ರ

|

Updated on: Dec 06, 2024 | 4:39 PM

ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ, ದಿನಬೆಳಗಾದರೆ ಅವರ ವಿಷಯದಲ್ಲಿ ಮಾತಾಡುವುದು ತನಗಿಷ್ಟವಿಲ್ಲ, ತನ್ನ ಮುಂದೆ ಹಲವಾರು ಅದ್ಯತೆಗಳಿವೆ, 9ನೇ ತಾರೀಖಿನಿಂದ ವಿಧಾನಸಭಾ ಅಧಿವೇಶನ ಶುರುವಾಗಲಿದೆ, ಇನ್ನೂ ಅನೇಕ ಕಡೆ ತಾನು ಗಮನ ಹರಿಸಬೇಕಿದೆ ಎಂದರು.

ಬೆಂಗಳೂರು: ಬಿಮ್ಸ್ ನಲ್ಲಿ ಬಾಣಂತಿಯರ ಸಾವಿನ ಬಗ್ಗೆ ರಾಜ್ಯ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅದರೆ ಆರೋಗ್ಯ ಸಚಿವರಿಗಾಗಲೀ, ವೈದ್ಯಕೀಯ ಶಿಕ್ಷಣ ಸಚಿವರಿಗಾಗಲೀ ಅಥವಾ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲೀ ಅಸ್ಪತ್ರೆಗೆ ಭೇಟಿ ನೀಡುವ ವ್ಯವಧಾನವೂ ಇಲ್ಲ ಸೌಜನ್ಯತೆಯೂ ಇಲ್ಲ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಳ್ಳಾರಿ ಬಾಣಂತಿಯರ ಸಾವು: ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ