ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವ ಯತ್ನಾಳ್ ಮಾನಸಿಕವಾಗಿ ಅಸ್ವಸ್ಥ: ವೀರಭದ್ರ ಸ್ವಾಮೀಜಿ

ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವ ಯತ್ನಾಳ್ ಮಾನಸಿಕವಾಗಿ ಅಸ್ವಸ್ಥ: ವೀರಭದ್ರ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 06, 2024 | 3:13 PM

ತಪ್ಪನ್ನು ತಿದ್ದಿಕೊಳ್ಳಲು ಬಸನಗೌಡ ಯತ್ನಾಳ್​ಗೆ ಈಗಲೂ ಅವಕಾಶವಿದೆ, ಅವರು ಲಿಂಗಾಯತರ ಕ್ಷಮಾಪಣೆ ಕೇಳಲಿ, ಬೈದವರನ್ನು ಬಂಧುಗಳೆನ್ನಿ ಅಂತ ಬಸವಣ್ಣನವರೇ ಹೇಳಿದ್ದಾರೆ, ಅವರ ಮೇಲೆ ತಮಗೆ ಗೌರವವಿದೆ, ಕ್ಷಮಾಪಣೆ ಕೇಳುವ ಮೂಲಕ ಅವರು ಆ ಗೌರವ ಉಳಿಸಿಕೊಳ್ಳಲಿ ಎಂದು ವೀರಭದ್ರ ಸ್ವಾಮೀಜಿ ಹೇಳಿದರು.

ರಾಯಚೂರು: ವಿಶ್ವದ ಸಾಂಸ್ಕೃತಿಕ ರಾಯಭಾರಿ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ರಾಯಚೂರಿನ ಬಸವ ಯೋಗಾಶ್ರಮದ ಅಧ್ಯಕ್ಷ ವೀರಭದ್ರ ಸ್ವಾಮೀಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸವಣ್ಣವರು ಯಾಕೆ ಹೊಳೆಗೆ ಹಾರಿ ಸಾಯ್ತಾರೆ, ಯತ್ನಾಳ್ ಹೊಳೆಗೆ ಬಿದ್ದು ಸಾಯಲಿ, ಬಸವಣ್ಣನವರ ಬಗ್ಗೆ ಕೀಳಾಗಿ ಮಾತಾಡುವ ಮೂಲಕ ಲಿಂಗಾಯತರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ, 3-4 ಬಾರಿ ಶಾಸಕನಾಗಿ ಅಯ್ಕೆಯಾದರೂ ಇವರಿಗೆ ಇನ್ನೂ ಬುದ್ಧಿ ಬಂದಿಲ್ಲ, ತಾನು ಕಟ್ಟಿಕೊಂಡಿರುವ ಲಿಂಗದ ಮೇಲೂ ಅಭಿಮಾನವಿಲ್ಲ ಎಂದು ಸ್ವಾಮೀಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯತ್ನಾಳ್ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ಕ್ರಮದ ಬಗ್ಗೆ ಕಾರ್ಯಕರ್ತರ ಹಾಗೆ ನನಗೂ ಗೊಂದಲ: ವಿಜಯೇಂದ್ರ