ಆನೇಕಲ್​ನಲ್ಲಿ ಕಾಡಾನೆ ಕಾಟ: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು

ಆನೇಕಲ್​ನಲ್ಲಿ ಕಾಡಾನೆ ಕಾಟ: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು

ರಾಮು, ಆನೇಕಲ್​
| Updated By: Ganapathi Sharma

Updated on: Dec 06, 2024 | 2:41 PM

ಸುಮಾರು 8 ಕಾಡಾನೆಗಳು ಅನೇಕಲ್​ನ ಗುಮ್ಮಳಾಪುರ ಬಳಿಯ ಗಂಗೊಂಡಹಳ್ಳಿಯಲ್ಲಿ ಕೃಷಿ ಭೂಮಿಗೆ ನುಗ್ಗಿ ದಾಂಧಲೆ ನಡೆಸಿವೆ. ಸ್ಥಳಕ್ಕಾಗಮಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಅಟ್ಟಿದ್ದಾರೆ. ವಿಡಿಯೋ ಇಲ್ಲಿದೆ.

ಆನೇಕಲ್, ಡಿಸೆಂಬರ್ 6: ಕರ್ನಾಟಕ ಗಡಿ ಭಾಗದ ಗುಮ್ಮಳಾಪುರ ಬಳಿಯ ಗಂಗೊಂಡಹಳ್ಳಿಯಲ್ಲಿ 8 ಕಾಡಾನೆಗಳು ಜಮೀನಿಗೆ ನುಗ್ಗಿ ಬೀಡುಬಿಟ್ಟಿದ್ದವು. ಆಹಾರ ಅರಸಿ ಬಂದ ಕಾಡಾನಾನೆಗಳು ಗ್ರಾಮದ ಹೊಲ, ಗದ್ದೆಗಳಲ್ಲಿ ಸಂಚರಿಸುತ್ತಿದ್ದವು. ನಂತರ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಿದ್ದಾರೆ. ಮತ್ತೊಂದೆಡೆ, ಮೈಸೂರಿನಲ್ಲಿಯೂ ಕಾಡಾನೆ ಹಾವಳಿ ಮುಂದುವರಿದಿದೆ. ಕೆಆರ್ ನಗರ ತಾಲ್ಲೂಕಿನ ಮಂಡಿಗನಹಳ್ಳಿ ಅಡಗೂರು ಗ್ರಾಮದಲ್ಲಿ 2 ಕಾಡಾನೆಗಳು ದಾಳಿ ನಡೆಸಿದ್ದು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನು ನಾಶ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ