ಮಹಾಪರಿನಿರ್ವಾಣ ದಿನ: ಡಾ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದ ಸಿದ್ದರಾಮಯ್ಯ
ಭಾರತ ರತ್ನ ಬಿಅರ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಅಚರಿಸಲಾಗುತ್ತದೆ. ಪರಿನಿರ್ವಾಣ ಬೌದ್ಧಧರ್ಮದ ಪ್ರಾಥಮಿಕ ತತ್ವಗಳಲ್ಲಿ ಒಂದಾಗಿದ್ದು ಅದರರ್ಥ ಸಾವಿನ ನಂತರ ನಿರ್ವಾಣ ಆಗಿದೆ, ಅಂದರೆ ಮರಣಾ ನಂತರ ಮುಕ್ತಿ ಅಥವಾ ಸ್ವಾತಂತ್ರ್ಯ ಪಡೆದವನು.
ಬೆಂಗಳೂರು: ಡಾ ಬಿಅರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧ ಅವರಣದಲ್ಲಿರುವ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮುಖ್ಯಮಂತ್ರಿಯವರೊಂದಿಗೆ ಅವರ ಸಚಿವ ಸಂಪುಟ ಹಲವು ಸಚಿವರು, ಶಾಸಕರು, ಆಧಿಕಾರಿ ವರ್ಗ ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. ಇಂಧನ ಸಚಿವ ಕೆಜೆ ಜಾರ್ಜ್, ಸಮಾಜ ಕಲ್ಯಾಣ ಖಾತೆ ಸಚಿವನ ಡಾ ಹೆಚ್ ಸಿ ಮಹದೇವಪ್ಪ, ಮಾಜಿ ಸಚಿವ ಹೆಚ್ ಅಂಜನೇಯ ಮೊದಲಾದವರನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಬಾರ್ಡ್ ಸಾಲದ ಮೊತ್ತ ಅರ್ಧಕ್ಕಿಂತ ಜಾಸ್ತಿ ಕಡಿಮೆಯಾದರೂ ರೈತ ಮತ್ತು ಮಣ್ಣಿನ ಮಕ್ಕಳು ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ
Latest Videos